News Karnataka Kannada
Monday, April 29 2024
ತೆಲಂಗಾಣ

ಆಂಧ್ರಪ್ರದೇಶ ಐಟಿ ಸಚಿವ ಮೇಕಪತಿ ಗೌತಮರೆಡ್ಡಿ ನಿಧನ

Mekapathy
Photo Credit :

ಹೈದರಾಬಾದ್: ಆಂಧ್ರ ಪ್ರದೇಶ ಸರ್ಕಾರದ ಐಟಿ ಸಚಿವ ಮೇಕಪತಿ ಗೌತಮರೆಡ್ಡಿ ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗೌತಮ್​ ರೆಡ್ಡಿ ಒಂದು ವಾರದ ಹಿಂದಷ್ಟೇ ದುಬೈ ಎಕ್ಸ್​ಪೋದಲ್ಲಿ ಪಾಲ್ಗೊಂಡು ವಿವಿಧ ಕಂಪನಿಗಳ ಜೊತೆ ಆಂಧ್ರಪ್ರದೇಶದಲ್ಲಿ ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿದ್ದರು, ಫೆಬ್ರವರಿ 20ರಂದು ದುಬೈಯಿಂದ ಹೈದರಾಬಾದ್​ಗೆ ಬಂದಿದ್ದರು.

ಮಾಜಿ ಸಂಸದ ಮೇಕಪತಿ ರಾಜಮೋಹನ್​ ರೆಡ್ಡಿ ಅವರ ಪುತ್ರರಾದ ಗೌತಮ್​ರೆಡ್ಡಿ ನೆಲ್ಲೂರು ಜಿಲ್ಲೆಯ ಆತ್ಮಾಕೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2014, 2019 ರಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಗೌತಮ್​ ರೆಡ್ಡಿ ಅವರಿಗೆ ಇಂದು ಬೆಳಗ್ಗೆ ಹಠಾತ್​ ಹೃದಯಾಘಾತ ಉಂಟಾಗಿದೆ. ಈ ವೇಳೆ ಜೂಬ್ಲಿ ಹಿಲ್ಸ್​ನ ಅಪೋಲೋ ಆಸ್ಪತ್ರೆಗೆ ರವಾನೆ ಮಾಡುತ್ತಿರುವಾಗಲೇ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು