News Karnataka Kannada
Thursday, April 25 2024
Cricket
ತಮಿಳುನಾಡು

ಚಂದ್ರಯಾನ-3 ಹಿಂದಿರುವ ಮಾಸ್ಟರ್ ಮೈಂಡ್ ಯಾರು ಗೊತ್ತಾ ?

Scientist Veera Muthuvel
Photo Credit : By Author

ಚೆನ್ನೈ: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವಿಜ್ಞಾನಿ ಡಾ.ಪಿ.ವೀರ ಮುತ್ತುವೇಲ್ ಅವರು ಇಂದು (ಜುಲೈ 14, 2023)  ಮಧ್ಯಾಹ್ನ 2:35 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ಚಂದ್ರಯಾನ್ -3 ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಚಂದ್ರಯಾನ 3 ಬಾಹ್ಯಾಕಾಶ ನೌಕೆಯ ಯೋಜನಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ಪಿ. ವೀರಾ ಮುತ್ತುವೆಲ್ ಅವರು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಜನಿಸಿದರು. ವಿಲ್ಲುಪುರಂನ ರೈಲ್ವೆ ಸ್ಕೂಲ್​ನಲ್ಲಿ ವಿಧ್ಯಾಭ್ಯಾಸ ಮಾಡಿದ ನಂತರ ಖಾಸಗಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದರು. ಆದರೆ ಬಾಹ್ಯಾಕಾಶದ ಮೇಲಿನ ಆಸಕ್ತಿ ಇವರಲ್ಲಿತ್ತು. ಹೀಗಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಕೆಲಸವನ್ನು ತೊರೆದು, ತಾಂಬರಂನ ಖಾಸಗಿ ಕಾಲೇಜಿನಲ್ಲಿ ಸೇರಿಕೊಂಡರು. ನಂತರ ಉನ್ನತ ವ್ಯಾಸಂಗಕ್ಕಾಗಿ ಐಐಟಿ ಚೆನ್ನೈಗೆ ಸೇರಿಕೊಂಡು ಏರೋಸ್ಪೇಸ್ ಕ್ಷೇತ್ರದಲ್ಲಿ ಪ್ರಮುಖ ಸಂಶೋಧನೆಗಳನ್ನು ನಡೆಸಿದರು.

ಹಾರ್ಡ್‌ವೇರ್ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವೀರ ಮುತ್ತುವೇಲ್ ಅವರಿಗೆ 1989 ರಲ್ಲಿ ಇಸ್ರೋ ದಲ್ಲಿ ವಿಜ್ಞಾನಿಯಾಗುವ ಅವಕಾಶ ಒದಗಿಬಂತು.  ತನ್ನ ಕನಸಿನ  ಅವಕಾಶವನ್ನು ಕೈಬಿಡದ ಮುತ್ತುವೇಲ್ ಇಸ್ರೋ ಸೇರಿದರು. ನಂತರ ಬಂದ ಅವಕಾಶಗಳನ್ನು ಹಿಂತಿರುಗಿ ನೋಡಲೇ ಇಲ್ಲ. ದೇಶ ಮತ್ತು ವಿದೇಶದ ಅನೇಕ ಸಂಸ್ಥೆಗಳ ಜೊತೆಗೆ ಇಸ್ರೋದಲ್ಲಿ ಕೆಲಸ ಮಾಡುವುದನ್ನು ತಮ್ಮ ಗುರಿಯನ್ನಾಗಿ ಮಾಡಿಕೊಂಡರು.

ಇನ್ನು 2016 ರಲ್ಲಿ ಬಾಹ್ಯಾಕಾಶ ನೌಕೆಯ ಎಲೆಕ್ಟ್ರಾನಿಕ್ ಪ್ಯಾಕೇಜ್‌ನಲ್ಲಿ ಕಂಪನ ನಿಯಂತ್ರಣ ವ್ಯವಸ್ಥೆಯ ಕುರಿತು ಸಂಶೋಧನಾ ಪ್ರಬಂಧವನ್ನು ಸಲ್ಲಿಸಿದರು. ಅಲ್ಲದೆ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ಇದಕ್ಕೆ ಸಂಬಂಧಿಸಿದಂತೆ ಪ್ರಯೋಗಗಳನ್ನು ನಡೆಸಲಾಯಿತು. ಇದರಿಂದ ಬಾಹ್ಯಾಕಾಶ ನೌಕೆಯ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲು ಮತ್ತು ಬಾಹ್ಯಾಕಾಶ ನೌಕೆಯ ರೋವರ್ ಭಾಗಕ್ಕೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ ಎಂಬುದು ತಿಳಿಯಿತು. ಈ ಸಂಶೋಧನಾ ಪ್ರಬಂಧವನ್ನು ನೋಡಿ ಅಚ್ಚರಿಗೊಂಡ ಇಸ್ರೋ, ವೀರ ಮುತ್ತುವೇಲ್ ಅವರನ್ನು ಶ್ಲಾಘಿಸಿತು.

ಇಸ್ರೋದಲ್ಲಿ ಅನೇಕ ಯೋಜನೆಗಳು ಮತ್ತು ವಿವಿಧ ಜವಾಬ್ದಾರಿಗಳಲ್ಲಿ ಕೆಲಸ ಮಾಡಿದ 30 ವರ್ಷಗಳ ಅನುಭವದ ನಂತರ, ವಿಜ್ಞಾನಿ ವೀರ ಮುತ್ತುವೇಲ್ ಅವರನ್ನು 2019 ರಲ್ಲಿ ವಿಜ್ಞಾನಿ ಕವಿತಾ ಅವರ ಬದಲಿಗೆ ಚಂದ್ರಯಾನ 3 ರ ನಿರ್ದೇಶಕರಾಗಿ ನೇಮಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು