ತಮಿಳುನಾಡು: ವಿಷಪೂರಿತ ಮದ್ಯ ದುರಂತಕ್ಕೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿಕೆ

ಚೆನ್ನೈ, ಮೇ.16: ತಮಿಳುನಾಡಿನ ನಕಲಿ ಮದ್ಯ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18 ಕ್ಕೆ ಏರಿದೆ. ವಿಲ್ಲುಪುರಂ ಜಿಲ್ಲೆಯ ಮರಕ್ಕನಂನಲ್ಲಿ 12 ಮಂದಿ ಸಾವನ್ನಪ್ಪಿದ್ದರೆ, ಚೆಂಗಲ್ಪಟ್ಟು ಜಿಲ್ಲೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಸ್ಥಳಗಳಿಗೆ ಭೇಟಿ ನೀಡಿದ್ದು, ಈ ಬಗ್ಗೆ ಸಿಬಿ-ಸಿಐಡಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ  ಹಲವು ಅಧಿಕಾರಗಳನ್ನು ಅಮಾನತುಗೊಳಿಸಲಾಗಿದೆ.

ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದು, ನಕಲಿ ಮದ್ಯ ಸೇವಿಸಿ ಆಸ್ಪತ್ರೆಗೆ ದಾಖಲಾದವರಿಗೆ 50 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ವಿಲ್ಲುಪುರಂ ಜಿಲ್ಲೆಯ ಮರಕ್ಕನಂನಲ್ಲಿ ಸ್ಥಳೀಯವಾಗಿ ತಯಾರಿಸಿದ ಮದ್ಯವನ್ನು ಸೇವಿಸಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ(ಇಪಿಎಸ್) ಮಂಗಳವಾರ ಈ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.

 

Gayathri SG

Recent Posts

ಹೆಚ್ಚಾದ ಬಿಸಿಲ ಬೇಗೆ; ಗಗನಕ್ಕೇರಿದ ತರಕಾರಿ ಬೆಲೆ

ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಕಾರಣ ತರಕಾರಿ ಬೆಲೆ ಭಾರಿ ದುಬಾರಿಯಾಗಿದೆ. ಬೀನ್ಸ್ ದರ…

24 mins ago

ಚಿನ್ನದ ಬೆಲೆ ಗ್ರಾಮ್​ಗೆ 130 ರೂನಷ್ಟು ಇಳಿಕೆ; ಇವತ್ತಿನ ಬೆಲೆಗಳೆಷ್ಟು?

ಮೂರ್ನಾಲ್ಕು ವಾರ  ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರ ಸ್ವಲ್ಪಮಟ್ಟಿಗೆ ಇಳಿಕೆ ಕಂಡಿವೆ. ಬೆಳ್ಳಿ ಬೆಲೆ ಕಳೆದ…

40 mins ago

ಆರ್ಚರಿ ವಿಶ್ವಕಪ್​ನಲ್ಲಿ ಭಾರತಕ್ಕೆ 4 ಚಿನ್ನದ ಪದಕ

ಭಾರತದ ಬಿಲ್ಗಾರರು ಆರ್ಚರಿ ವಿಶ್ವಕಪ್​ ಸ್ಟೇಜ್​-1ರಲ್ಲಿ 4 ಚಿನ್ನ ಸಹಿತ 5 ಪದಕ ಗೆದ್ದುಕೊಂಡಿದ್ದಾರೆ. ಏಷ್ಯನ್​ ಗೇಮ್ಸ್​ ಚಾಂಪಿಯನ್​ ಜ್ಯೋತಿ…

59 mins ago

ರಾಜ್ಯದಲ್ಲಿ ಇಂದು 4 ಕಡೆ ಪ್ರಧಾನಿ ಮೋದಿ ರ‍್ಯಾಲಿ

ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಕಾವು ಮತ್ತಷ್ಟು ಹೆಚ್ಚಾಗಿದ್ದು, ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದಿದೆ. ಇನ್ನು ಮೇ 7ರಂದು…

1 hour ago

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಏ.28 ರಂದು “ಆಟಿಸಂ ಜಾಗೃತಿ”ಕುರಿತು ಎಕ್ಷಪ್ಸನಲ್ ಕಾರ್ಯಕ್ರಮ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ Aibha association…

9 hours ago

ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಎಸ್‌ಐಟಿ ತನಿಖೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ…

10 hours ago