News Karnataka Kannada
Tuesday, April 30 2024
ತಮಿಳುನಾಡು

ಚೆನ್ನೈ: ಆಂಧ್ರ, ಗುಜರಾತ್ ನಲ್ಲಿ ಪ್ರವಾಹ ಪರಿಸ್ಥಿತಿ ಸಮೀಕ್ಷೆಗೆ ಗರುಡ ಡ್ರೋನ್

BSF shoots down Pak drone in Punjab border area
Photo Credit :

ಚೆನ್ನೈ: ಆಂಧ್ರಪ್ರದೇಶ ಮತ್ತು ಗುಜರಾತ್ ನ ಪ್ರವಾಹ ಪರಿಸ್ಥಿತಿಯನ್ನು ನಿರ್ಣಯಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ ಡಿ ಆರ್ ಎಫ್) ನಗರ ಮೂಲದ ಡ್ರೋನ್-ಆಸ್-ಎ-ಸರ್ವೀಸ್ (ಡಿಎಎಎಸ್) ಪೂರೈಕೆದಾರ ಗರುಡಾ ಏರೋಸ್ಪೇಸ್ ಅನ್ನು ನಿಯೋಜಿಸಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ರೋನ್  ಗಳನ್ನು ಔಷಧಿಗಳು ಮತ್ತು ಆಹಾರದ ಪೂರೈಕೆಗೆ ಬಳಸಲಾಗುವುದು ಎಂದು ಅಧಿಕಾರಿ ಹೇಳಿದರು.

“ಆಂಧ್ರಪ್ರದೇಶದ ಗುಂಟೂರು ಮತ್ತು ಗುಜರಾತ್ ನ ವಡೋದರಾದಲ್ಲಿ ಪ್ರವಾಹ ಮೌಲ್ಯಮಾಪನ ಮಾಡಲು ಎನ್ ಡಿ ಆರ್ ಎಫ್  ನಮಗೆ ಕೇಳಿದೆ. ನಾವು ಪ್ರತಿ ಸ್ಥಳದಲ್ಲಿ ಐದು ಡ್ರೋನ್  ಗಳನ್ನು ನಿಯೋಜಿಸುತ್ತೇವೆ” ಎಂದು ಗರುಡಾ ಏರೋಸ್ಪೇಸ್ನ ಸ್ಥಾಪಕ ಮತ್ತು ಸಿಇಒ ಅಗ್ನಿಶ್ವರ್ ಜಯಪ್ರಕಾಶ್ ತಿಳಿಸಿದರು.

ಜಯಪ್ರಕಾಶ್ ಅವರ ಪ್ರಕಾರ, ಚೆನ್ನೈ ಮತ್ತು ದೆಹಲಿಯಿಂದ ಡ್ರೋನ್ ಗಳನ್ನು ತೆಗೆದುಕೊಳ್ಳಲಾಗುವುದು. ಸಮೀಕ್ಷೆ ಮಾಡಬೇಕಾದ ಪ್ರದೇಶವು ಸುಮಾರು 1,000 ಚದರ ಕಿ.ಮೀ ಇರಲಿದೆ ಎಂದು ಜಯಪ್ರಕಾಶ್ ಹೇಳಿದರು.

ಪ್ರವಾಹ ಮತ್ತು ಭೂಕುಸಿತ ಪರಿಸ್ಥಿತಿಯ ಸಮಯದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸಲು ಗರುಡಾ ಏರೋಸ್ಪೇಸ್ ಇತ್ತೀಚೆಗೆ ಅಸ್ಸಾಂನಲ್ಲಿ ತೊಡಗಿಸಿಕೊಂಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು