News Karnataka Kannada
Saturday, April 20 2024
Cricket
ತಮಿಳುನಾಡು

ರಾಜ್ಯಸಭೆ ಸದಸ್ಯರಾಗಿ ಅಣ್ಣಾಮಲೈ: ಏನಿದು ಬಿಜೆಪಿ ನಾಯಕರ ತಂತ್ರ

Annamalai at the valedictory function of Grama Vikasa Yatra
Photo Credit : News Kannada

ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ರಾಜಸ್ಥಾನದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆಯಿದೆ.

ಅಣ್ಣಾಮಲೈ ಅವರು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಅವರು ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿ ಕಳೆದ ವರ್ಷ ಬಿಜೆಪಿ ಸೇರಿದ್ದರು. ತಮಿಳುನಾಡಿನಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಂಘಟನೆಗೆ ಬಲಬಂದಿದ್ದು, ತಮಿಳುನಾಡು ಸರ್ಕಾರದ ಹುಳುಕುಗಳನ್ನು ಆಕ್ರಮಣಕಾರಿಯಾಗಿ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಬಿಜೆಪಿಗೆ ನೆಲೆಯಿಲ್ಲದ ತಮಿಳುನಾಡಿನಲ್ಲಿ ಪಕ್ಷವನ್ನು ಜೀವಂತ ಸಂಘಟನೆಯಾಗಿ ಮಾಡಿದ್ದಾರೆ.

ಅಲ್ಲದೆ ಮುಂದಿನ ವಾರ ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಬ್ರಿಕ್ಸ್‌ನ ನೀತಿ ನಿರೂಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಖುವ ನಾಲ್ಕು ಬಿಜೆಪಿ ಸದಸ್ಯರ ನಿಯೋಗದಲ್ಲಿ ಅಣ್ಣಾಮಲೈ ಕೂಡ ಸೇರಿದ್ದಾರೆ.

ಅಣ್ಣಾಮಲೈ ಅವರು ಜುಲೈ 28 ರಿಂದ ತಮಿಳುನಾಡಿನಾದ್ಯಂತ ‘ಎನ್ ಮನ್ ಎನ್ ಮಕ್ಕಳ್’ ಎಂಬ ಶೀರ್ಷಿಕೆಯಡಿ ಪಾದಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ. ರಾಮೇಶ್ವರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಪಾದಯಾತ್ರೆ’ಯನ್ನು ಉದ್ಘಾಟಿಸಲಿದ್ದಾರೆ.

ಚೆನ್ನೈ ಮೂಲದ ಚಿಂತಕರ ಚಾವಡಿ ನೀತಿ ಮತ್ತು ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ ಸಿ.ರಾಜೀವ್, ಈ ಕುರಿತು ಐಎಎನ್‌ಎಸ್‌ ನೊಂದಿಗೆ ಮಾತನಾಡಿದ್ದು, ಕೆ. ಅಣ್ಣಾಮಲೈ ಅವರು ಬಿಜೆಪಿಯ ತಮಿಳುನಾಡು ಘಟಕದ ರಾಜ್ಯಾಧ್ಯಕ್ಷರಾದಾಗಿನಿಂದ ಪಕ್ಷ ಸಂಘಟನೆ ದೃಢಗೊಳ್ಳುತ್ತಾ ಸಾಗಿದೆ. ಆಡಳಿತಾರೂಢ ಡಿಎಂಕೆ ವಿರುದ್ಧದ ಹೋರಾಟದಲ್ಲಿ ಅವರ ಪಾಲು ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.

ಅಣ್ಣಾಮಲೈ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದರೆ ರಾಜ್ಯದಲ್ಲಿ ಬಿಜೆಪಿಯ ಭವಿಷ್ಯಕ್ಕೆ ದೊಡ್ಡ ಬಲ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು