ವಿವಾಹ ಸಮಾರಂಭದಲ್ಲಿ ವಧು ಡ್ಯಾನ್ಸ್ ವರನಿಂದ ಕಪಾಳಮೋಕ್ಷ!

ತಮಿಳುನಾಡು: ವಿವಾಹ ಸಮಾರಂಭದಲ್ಲಿ ಮದುಮಗಳು ಡ್ಯಾನ್ಸ್ ಮಾಡಿದ್ದು, ಈ ಸಂದರ್ಭದಲ್ಲಿ ಆಕ್ರೋಶಗೊಂಡ ವರ ಆಕೆಯ ಕೆನ್ನೆಗೆ ಹೊಡೆದಿದ್ದ, ಇದರ ಪರಿಣಾಮ ಮಧುಮಗಳು ತನ್ನ ಸಹೋದರ ಸಂಬಂಧಿಯನ್ನು ವಿವಾಹವಾಗಿರುವ ಪ್ರಕರಣ ಇದಾಗಿದೆ.

ಇದೊಂದು ಸಿನಿಮಾ ಶೈಲಿಯಲ್ಲಿ ನಡೆದ ಘಟನೆಯಂತಿದ್ದು, ಸ್ಥಳೀಯ ಪ್ರಸಿದ್ಧ ಉದ್ಯಮಿಯೊಬ್ಬರ ಮಗಳ ವಿವಾಹ ತಮಿಳುನಾಡಿನ ಕಡಂಪುಲಿಯೂರ್ ನಲ್ಲಿ ಜನವರಿ 20ರಂದು ನಡೆಯಬೇಕಾಗಿತ್ತು.

ಪನ್ರುಟಿಯ ವಧು ಹಾಗೂ ಪೆರಿಯಕುಟ್ಟುಪಾಳ್ಯಂನ ವರ 2021ರ ನವೆಂಬರ್ 21ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.2022ರ ಜನವರಿ 19ರಂದು ಜೋಡಿಯ ವಿವಾಹಕ್ಕೆ ಒಂದು ದಿನದ ಮೊದಲು ನಡೆದ ವಿವಾಹ ಸಮಾರಂಭದಲ್ಲಿ ವರ, ವಧು ಹಾಗೂ ಸಂಬಂಧಿಕರು ಪಾಲ್ಗೊಂಡಿದ್ದರು. ವಿವಾಹ ಸಮಾರಂಭದಲ್ಲಿ ನಡೆಯುತ್ತಿದ್ದ ಡ್ಯಾನ್ಸ್ ಗೆ ವಧು ಹೆಜ್ಜೆ ಹಾಕತೊಡಗಿದ್ದಳು, ಆರಂಭದಲ್ಲಿ ಎಲ್ಲರೂ ಸಂಭ್ರಮಿಸಿದ್ದರು. ಏತನ್ಮಧ್ಯೆ ವಧುವಿನ ಸಹೋದರ ಸಂಬಂಧಿಯೊಬ್ಬ ಬಂದು ಆಕೆಯ ಕೈಹಿಡಿದು ಡ್ಯಾನ್ಸ್ ನಲ್ಲಿ ತೊಡಗಿದ್ದ.

ಇದು ವರನಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ತನ್ನ ಭಾವಿ ಪತ್ನಿ ಹಾಗೂ ಸಹೋದರ ಸಂಬಂಧಿಯನ್ನು ದೂರ ತಳ್ಳಿಬಿಟ್ಟಿದ್ದ. ಇದರ ಪರಿಣಾಮ ಇಬ್ಬರ ನಡುವೆ ವಾಗ್ವಾದ ನಡೆದಾಗ, ವರ ವಧುವಿನ ಕೆನ್ನೆಗೆ ಹೊಡೆದು ಬಿಟ್ಟಿದ್ದ. ಕೂಡಲೇ ಆಕೆಯು ವರನ ಕೆನ್ನೆಗೆ ಹೊಡೆದು ಬಿಟ್ಟಿದ್ದಳು.

ಈ ಘಟನೆ ನಡೆಯುತ್ತಿದ್ದಂತೆಯೇ ಎರಡು ಕುಟುಂಬಗಳ ಸದಸ್ಯರ ನಡುವೆ ಜಗಳ ಆರಂಭವಾಗಿಬಿಟ್ಟಿತ್ತು. ಇವನನ್ನು ನನ್ನ ಅಳಿಯನನ್ನಾಗಿ ಒಪ್ಪಿಕೊಳ್ಳಲಾರೆ ಎಂದು ವಧುವಿನ ತಂದೆ ಹೇಳಿದ್ದು, ವಧು ಕೂಡಾ ವರನನ್ನು ವಿವಾಹವಾಗುವುದಿಲ್ಲ ಎಂದು ಹೇಳಿಬಿಟ್ಟಿದ್ದಳು!

ಅದೇ ವಿವಾಹ ಸಮಾರಂಭದಲ್ಲಿ ವಧುವಿನ ತಂದೆ ಕೈಹಿಡಿದು ಡ್ಯಾನ್ಸ್ ಮಾಡಿದ್ದ ಸಹೋದರ ಸಂಬಂಧಿ ಹಾಗೂ ಆತನ ಕುಟುಂಬದವರ ಜೊತೆ ಮಾಡಿ ವಿವಾಹ ನಿಶ್ಚಯಿಸಿ, ಜನವರಿ 20ರಂದು ನಿಗದಿಪಡಿಸಿದ್ದ ದಿನಾಂಕದಂದೇ ಮಗಳ ವಿವಾಹ ನೆರವೇರಿಸಿರುವುದಾಗಿ ವರದಿ ವಿವರಿಸಿದೆ.

 

Swathi MG

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

7 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

7 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

8 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

8 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

9 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

9 hours ago