ತಮಿಳುನಾಡು

ಚೆನ್ನೈನಲ್ಲಿ ನಿನ್ನೆ ರಾತ್ರಿಯೂ ಧಾರಾಕಾರ ಮಳೆ ಸುರಿದಿದ್ದು, ರಸ್ತೆಗಳು, ಮನೆಗಳು ಜಲಾವೃತ

ಚೆನ್ನೈನಲ್ಲಿ ನಿನ್ನೆ ರಾತ್ರಿಯೂ ಧಾರಾಕಾರ ಮಳೆ ಸುರಿದಿದ್ದು, ರಸ್ತೆಗಳು, ಮನೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನ ನೀರು ಹೊರಹಾಕಲಾರದೆ ಪರದಾಡುತ್ತಿದ್ದಾರೆ. ಚೆನ್ನೈನ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ವ್ಯವಸ್ಥೆ ಇಲ್ಲದಂತಾಗಿದೆ.

ನಿನ್ನೆ ಒಂದೇ ದಿನದಲ್ಲಿ 502  ರಸ್ತೆಗಳು ಜಲಾವೃತಗೊಂಡಿದ್ದು, ಸ್ಥಳೀಯ ಆಡಳಿತ ತೆರೆದಿರುವ ಸಹಾಯವಾಣಿಗೆ 3 ಸಾವಿರ ದೂರುಗಳು ಬಂದಿವೆ.

ಅಶೋಕ್ ನಗರ, ಟಿ ನಗರ ರಸ್ತೆಗಳಲ್ಲಿ ನೀರು ತುಂಬಿದ್ದು, ಈ ಭಾಗಗಳಲ್ಲಿ ವಾಸಿಸುವ ಜನರಿಗೆ ಮನೆಯ ಬಾಗಿಲು ತೆರೆಯುವುದೂ ಅಸಾಧ್ಯವಾಗಿದೆ.

ಇಂದು ಮಳೆ ಮುಂದುವರಿದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಆದರೆ ಕಡಿಮೆ ಪ್ರಮಾಣದ ಮಳೆಯಾದರೆ ರಸ್ತೆಗಳಲ್ಲಿ ನೀರಿನ ಮಟ್ಟ ಕಡಿಮೆ ಆಗಲಿದೆ. ಇನ್ನು ನೀರನ್ನು ಪಂಪ್ ಮಾಡಿ ನದಿಗಳಿಗೆ ಬಿಡಲಾಗುತ್ತಿದೆ. ಆದರೆ ಹೆಚ್ಚು ಮಳೆ ಕಾರಣ ಪಂಪ್ ಪ್ರಕ್ರಿಯೆ ನಿಧಾನವಾಗುತ್ತಿದೆ.

Sneha Gowda

Recent Posts

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್​​ ಫೈರ್; ಯುವಕ ಸಾವು

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಘಟನೆ ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ…

3 mins ago

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

18 mins ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

35 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

1 hour ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago