ಚೆನೈ : ಸಿಲಂಬರಸನ್ ಎಕೆಎ ಸಿಂಬು ಅವರನ್ನ ಇಂದು (ಡಿಸೆಂಬರ್ 11) ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಟನಿಗೆ ತೀವ್ರ ವೈರಲ್ ಸೋಂಕಿರುವುದು ಖಚಿತವಾಗಿದೆ ಎಂದು ವರದಿಯಾಗಿದೆ. ಹಾಗಾಗಿ ಅವರನ್ನ ಸಧ್ಯ ಆಸ್ಪತ್ರೆಯಲ್ಲಿ ದಾಖಲಾಗಿದೆ. ಆದ್ರೆ, ನಟನಿಗೆ ಕೋವಿಡ್-19ನಿಂದ ಸೋಂಕು ತಗುಲಿಲ್ಲ ಎಂದು ಹೇಳಲಾಗ್ತಿದೆ.
ಸಿಂಬು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ನಟನಿಗೆ ತೀವ್ರ ಜ್ವರ ಮತ್ತು ಗಂಟಲು ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಇನ್ನು ನಟನಿಗೆ ವೈರಲ್ ಸೋಂಕು ಇದ್ದು, ವರದಿ ಕೋವಿಡ್-19 ನೆಗೆಟಿವ್ ಬಂದಿದೆ ಎನ್ನಲಾಗ್ತಿದೆ.
ಸಿಂಬು ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ʼಥನಿಂಧತು ಕಾಡುʼ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಗೌತಮ್ ಮೆನನ್ ನಿರ್ದೇಶನದ ಈ ಚಿತ್ರವು ಆಕ್ಷನ್ ಥ್ರಿಲ್ಲರ್ ಎಂದು ಸುಳಿವು ನೀಡಲಾಗಿದೆ. ಚಿತ್ರದ ಚಿತ್ರೀಕರಣ ವೇಗವಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ