News Karnataka Kannada
Saturday, April 13 2024
Cricket
ತಮಿಳುನಾಡು

ಸ್ಕ್ವಾಷ್‌ ಆಟಗಾರ್ತಿ ಜೋಷ್ನಾ ಚಿಣ್ಣಪ್ಪ’ಗೆ ಬಹುಮಾನ ನೀಡಿ ಗೌರವಿಸಿದ ತಮಿಳುನಾಡು ಸರ್ಕಾರ

Joshna Chinnappa (1)
Photo Credit : News Kannada

ಚೆನ್ನೈ, ಮೇ, 6 ; ಕೊಡಗು ಮೂಲದ ಸ್ಕ್ವಾಷ್‌ ಆಟಗಾರ್ತಿ ಕುಟ್ಟಂಡ ಜೋಷ್ನಾ ಚಿನ್ನಪ್ಪ ಅವರಿಗೆ ತಮಿಳು ನಾಡು ಮುಖ್ಯ ಮಂತ್ರಿ ಎಂ ಕೆ ಸ್ಟಾಲಿನ್‌ ಅವರು 75 ಲಕ್ಷ ರೂಪಾಯಿಗಳ ಬಹುಮಾನ ನೀಡಿ ಗೌರವಿಸಿದ್ದಾರೆ.

ಸ್ಕಾಟ್‌ ಲ್ಯಾಂಡ್‌ ನ ಗ್ಲಾಸ್ಗೋ ದಲ್ಲಿ ಕಳೆದ ಏಪ್ರಿಲ್‌ ತಿಂಗಳಿನಲ್ಲಿ ನಡೆದ ವರ್ಲ್ಡ್‌ ಡಬಲ್ಸ್‌ ಸ್ಕ್ವಾಷ್‌ ಚಾಂಪಿಯನ್‌ ಶಿಪ್‌ ಸ್ಪರ್ದೆಯಲ್ಲಿ ಜೋಷ್ನಾ ಅವರು ಚಿನ್ನದ ಪದಕ ಗೆದ್ದಿದ್ದರು. ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಚಿನ್ನದ ಪದಕ ಗೆದಿದ್ದ ಅವರಿಗೆ ತಮಿಳುನಾಡು ಸರ್ಕಾರ ಕಳೆದ ವಾರ 75 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡುವ ಮೂಲಕ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿದೆ. ಚೆಕ್‌ ವಿತರಣೆ ವೇಳೆ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಶಿವ ಮೇಯನಾಥನ್‌, ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಪೂರ್ವ, ತಮಿಳುನಾಡು ಕ್ರೀಡಾ ಅಭಿವೃದ್ದಿ ಪ್ರಾಧಿಕಾರ ಮುಖ್ಯಸ್ಥ ಡಾ ಅನಂತ್‌ ಕುಮಾರ್‌ , ತಮಿಳುನಾಡು ಸ್ಕ್ವಾಷ್‌ ರಾಕೆಟ್‌ ಅಸೋಸಿಯೇಷನ್‌ ಅದ್ಯಕ್ಷ ಎನ್‌ ರಾಮಚಂದ್ರನ್‌ ಉಪಸ್ಥಿತರಿದ್ದರು.

ಭಾರತದ ವೃತ್ತಿಪರ ಸ್ಕ್ವಾಷ್‌ ಆಟಗಾರ್ತಿ ಜೋಷ್ನಾ (35) ಅವರು ಅತ್ಯಂತ ಚಿಕ್ಕ ವಯಸ್ಸಿನಿಂದಲೇ ಸ್ಕ್ವಾಷ್‌ ಆಟದೆಡೆ ಆಕರ್ಷಿತರಾಗಿ ಬಾಲ ಕ್ರೀಡಾಪಟು ಆಗಿ ಗುರ್ತಿಸಿಕೊಂಡರು. ಕಳೆದ ಜುಲೈ 2016 ರಂದು ವಿಶ್ವ ರ್ಯಾಂಕಿಂಗ್‌ ನಲ್ಲಿ 10 ನೇ ಸ್ಥಾನಕ್ಕೆ ಏರಿ ಸಾಧನೆ ಮೆರೆದಿದ್ದರು. 2005 ನೇ ಇಸವಿಯಲ್ಲಿ 19 ವಯಸ್ಸಿನ ಒಳಗಿನ ವಿಭಾಗದಲ್ಲಿ ಬ್ರಿಟಿಷ್‌ ಜೂನಿಯರ್‌ ಸ್ಕ್ವಾಷ್‌ ಚಾಂಪಿಯನ್‌ ಶಿಪ್‌ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊತ್ತ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೂ ಪಾತ್ರವಾಗಿದ್ದರು. ಪ್ರಸ್ತುತ ಅವರು 18 ಕ್ಕೂ ಹೆಚ್ಚು ರಾಷ್ಟ್ರೀಯ ಚಾಂಪಿಯನ್‌ ಶಿಪ್‌ ಪದಕಗಳನ್ನೂ ಗೆದ್ದಿರುವ ಹಿರಿಮೆಗೆ ಪಾತ್ರರಾಗಿದ್ದಾರೆ. 2020 ರ ಫೆಬ್ರುವರಿಯಲ್ಲಿ 77 ನೇ ರಾಷ್ಟ್ರೀಯ ಚಾಂಪಿಯನ್‌ ಶಿಪ್‌ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇವರು ತಮ್ಮ 18 ನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಜೋಷ್ನಾ ಅವರು ಚೆನ್ನೈನಲ್ಲೇ ಹುಟ್ಟಿ ಬೆಳೆದಿದ್ದು ಇವರ ತಂದೆ ಅಂಜನ್‌ ಚಿನ್ನಪ್ಪ ಅವರು ಜಿಲ್ಲೆಯಲ್ಲಿ ಕಾಫಿ ತೋಟ ಹೊಂದಿದ್ದು , ಸ್ಕ್ವಾಷ್‌ ಕ್ರೀಡೆಯಲ್ಲಿ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಿದ್ದರು. ಜೋಷ್ನಾ ಅವರಿಗೆ ತಂದೆಯೇ ಸ್ಕ್ವಾಷ್‌ ಆಟದ ಮೊದಲ ತರಬೇತುದಾರ ಆಗಿದ್ದು ಅವರು ಫೀಲ್ಡ್‌ ಮಾರ್ಷಲ್‌ ಕೆ ಎಂ ಕಾರ್ಯಪ್ಪ ಅವರ ಸಂಬಂಧಿಯೂ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು