News Karnataka Kannada
Sunday, April 21 2024
Cricket
ದೇಶ

ಮಗುವಿನ ನಿರೀಕ್ಷೆಯಲ್ಲಿ ದಿ. ಗಾಯಕ ಸಿಧು ಮೂಸೆವಾಲಾ ತಾಯಿ

Siddh
Photo Credit : News Kannada

ಪಂಜಾಬ್:‌  ಪಂಜಾಬ್​ ಖ್ಯಾತ ಗಾಯಕ ದಿವಂಗತ ಸಿಧು ಮೂಸೆವಾಲಾ 2022ರಲ್ಲಿ ದುಷ್ಕರ್ಮಿಗಳ ಬಂದೂಕಿನ ದಾಳಿಗೆ ಹತ್ಯೆಯಾದರು. ನಡುಬೀದಿಯಲ್ಲಿ ಸಿಧು ವಾಹನವನ್ನು ಅಡ್ದಗಟ್ಟಿ ಬಂದೂಕಿನಿಂದ ಹತ್ಯೆ ಮಾಡಿದ್ದರು. ಇದ್ದಕ್ಕಿಂದ್ದಂತೆಯೇ ಮೂಸೆವಾಲಾ  ಹತ್ಯೆಯ ಸುದ್ದಿ ಅಂದು ಅನೇಕ ಅಭಿಮಾನಿಗಳಿಗೆ ನೋವು ನೀಡಿತ್ತು. ಆದರೂ ಇಂದಿಗೂ ಈ ಗಾಯಕನನ್ನು ಅಭಿಮಾನಿಗಳು ನೆನೆಯುತ್ತಾ ಬಂದಿದ್ದಾರೆ. ಹೀಗೆ ನೆನೆಪಿಸುತ್ತಾ, ಆರಾಧಿಸುತ್ತಾ ಬಂದಿರುವ ಅಭಿಮಾನಿಗಳಿಗೀಗ ಸಿಹಿ ಸುದ್ದಿಯೊಂದು ಇಲ್ಲಿದೆ.

ಸಿಧು ಮೂಸೆವಾಲಾ ತಾಯಿ ಚರಣ್​ ಕೌರ್​ ಮತ್ತೆ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರಂತೆ. ಇಂತಹದೊಂದು ಸುದ್ದಿಯನ್ನು ಸಿಧು ಕುಟಂಬದ ಮೂಲಗಳು ಖಚಿತಪಡಿಸಿವೆ. ಅಂದಹಾಗೆಯೇ ಈ ಸುದ್ದಿ ಹೊರಬಿದ್ದದ್ದೇ ತಡ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. ಮತ್ತೊಬ್ಬು ಸಿಧು ಭೂಮಿಗೆ ಬರಲು ರೆಡಿಯಾಗಿದ್ದಾನೆಂದು ಹೇಳುತ್ತಿದ್ದಾರೆ.

ಸಿಧು ತನ್ನ ಪೋಷಕರಿಗೆ ಒಬ್ಬನೇ ಮಗ. ಆದರೀಗ ತನ್ನ 50ರ ಹರೆಯದ ತಾಯಿ ಮತ್ತೊಮ್ಮೆ ಗರ್ಭಿಣಿಯಾಗುವ ಮೂಲಕ ಮತ್ತೊಬ್ಬ ಸಿಧುವನ್ನು ಮಾರ್ಚ್​ನಲ್ಲಿ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮತ್ತೊಂದು ವಿಚಾರವೆಂದರೆ ಚರಣ್​ ಕೌರ್​ ಆರು ತಿಂಗಳಿನಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು