ಜೈಪುರ: 15 ಸಾವಿರ ಮಂದಿಯಿಂದ ಯೋಗ ಪ್ರದರ್ಶನ

ಜೈಪುರ: 2023 ರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ 50 ದಿನಗಳ ನೆನಪಿಗಾಗಿ ಜೈಪುರದಲ್ಲಿ ಆಯೋಜಿಸಲಾದ ಯೋಗ ಮಹೋತ್ಸವ ಕಾರ್ಯಕ್ರಮದಲ್ಲಿ 15,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕಾಮನ್ ಯೋಗ ಪ್ರೋಟೋಕಾಲ್ ಪ್ರಕಾರವೇ ಯೋಗ ಪ್ರದರ್ಶಿಸಿದರು.

ರಾಜಸ್ಥಾನದ ಗವರ್ನರ್ ಕಲ್ರಾಜ್ ಮಿಶ್ರಾ, ಕೇಂದ್ರ ಆಯುಷ್ ಸಚಿವ, ಸರ್ಬಾನಂದ ಸೋನೋವಾಲ್, ಕೇಂದ್ರ ಜಲ ಶಕ್ತಿ ಸಚಿವ, ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಇತರರು ಇದ್ದರು.

ಗವರ್ನರ್ ಮಿಶ್ರಾ ಮಾತನಾಡಿ “ಯೋಗ ಮತ್ತು ಆಯುರ್ವೇದವು ಶತಮಾನಗಳ ಹಿಂದಿನ ಸುದೀರ್ಘ ಇತಿಹಾಸವನ್ನು ಹೊಂದಿದೆ. ಯೋಗದ ಮೊದಲ ಉಲ್ಲೇಖವು ಅತ್ಯಂತ ಹಳೆಯ ಪವಿತ್ರ ಗ್ರಂಥಗಳಲ್ಲಿ ಒಂದಾದ ಋಗ್ವೇದದಲ್ಲಿದೆ. ಈ ಆಧ್ಯಾತ್ಮಿಕ ಶಿಸ್ತು ತರಲು ಉದ್ದೇಶಿಸಿರುವ ಸೂಕ್ಷ್ಮ ವಿಜ್ಞಾನವನ್ನು ಆಧರಿಸಿದೆ. ಯೋಗ ಮತ್ತು ಆಯುರ್ವೇದವು ಕೋವಿಡ್‌ ನಿಯಂತ್ರಿಸಲು ಸಹಾಯ ಮಾಡಿದೆ ಈ ಕಾರ್ಯಕ್ರಮವನ್ನುಆಯೋಜಿಸಿದ್ದಕ್ಕಾಗಿ ನಾನು ಆಯುಷ್ ಸಚಿವಾಲಯವನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

Gayathri SG

Recent Posts

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೀದರ್ ಲೋಕಸಭಾ ಕ್ಷೇತ್ರದ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 7 ರಂದು ಶಾಂತಿಯುತವಾಗಿ ಮತದಾನ ನಡೆಯಿತು.

25 mins ago

ಹಾಸನ ವಿಡಿಯೋ ಪ್ರಕರಣ: ಡಿ.ಕೆ. ಶಿವಕುಮಾರ್‌ ಪಿತೂರಿ ಇದೆ ಎಂದ ಎಚ್‌.ಡಿ. ಕುಮಾರಸ್ವಾಮಿ

ಹಾಸನ ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಪಿತೂರಿ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ…

40 mins ago

ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ.

58 mins ago

ನಾಲ್ಕು ವರ್ಷಗಳ ನಂತರ ಧಾರವಾಡಕ್ಕೆ ಕಾಲಿಟ್ಟ ಶಾಸಕ ವಿನಯ್ ಕುಲಕರ್ಣಿ

ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿನಯ ಕುಲಕರ್ಣಿ ಹೈಕೋರ್ಟ್‌ ಅನುಮತಿ ಮೇರೆಗೆ ಮಂಗಳವಾರ…

1 hour ago

ಲೋಕಸಭೆ ಚುನಾವಣೆ: ಮೂರನೇ ಹಂತದ ಮತದಾನ ಮುಕ್ತಾಯ

ದೇಶದಾದ್ಯಂತ ಮೂರನೇ ಹಂತದ ಮತದಾನ ಮುಕ್ತಾಯವಾಗಿದೆ. ಬೆಳಗ್ಗ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಿತು. ಸಣ್ಣಪುಟ್ಟ ಗಲಾಟೆಗಳನ್ನು…

1 hour ago

ಅನಿಮೇಟೆಡ್ ವಿಡಿಯೋ ‘ತಕ್ಷಣ’ ತೆಗೆದುಹಾಕುವಂತೆ ಬಿಜೆಪಿಗೆ ಚುನಾವಣಾ ಆಯೋಗ ಆದೇಶ

ಮುಸ್ಲಿಂ ಸಮುದಾಯದ ಮೀಸಲಾತಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕರ್ನಾಟಕ ಘಟಕ ಹಂಚಿಕೊಂಡಿರುವ ಅನಿಮೇಟೆಡ್ ಕಾರ್ಟೂನ್ ವಿಡಿಯೋವನ್ನು 'ತಕ್ಷಣ' ತೆಗೆದುಹಾಕುವಂತೆ…

2 hours ago