ಸಿಕರ್ (ರಾಜಸ್ಥಾನ) : ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಗುರುವಾರ 4 ವರ್ಷದ ಬಾಲಕ ತೆರೆದ ಬೋರ್ವೆಲ್ಗೆ ಬಿದ್ದಿರುವ ಘಟನೆ ನಡೆದಿದೆ.
ಮಗುವಿನ ಜೀವ ಉಳಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಚುವರಿ ಕಲೆಕ್ಟರ್ ಧಾರಾ ಸಿಂಗ್ ಮೀನಾ, ಸಿಕರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ಬಾಲಕನೊಬ್ಬ 55 ಅಡಿಗಿಂತ ಹೆಚ್ಚು ಆಳದ ಮುಚ್ಚಳವಿಲ್ಲದ ಬೋರ್ವೆಲ್ಗೆ ಜಾರಿ ಬಿದ್ದಿದ್ದಾನೆ ಮತ್ತು ಬಾಲಕನನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.