ರಾಜಸ್ಥಾನ : ರಾಜಸ್ಥಾನದಲ್ಲಿ ಭಾನುವಾರ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ ನಡೆದಿದ್ದು, ಚಪ್ಪಲಿಯಲ್ಲಿ ಬ್ಲೂಟೂತ್ ಬಳಸಿ ಕಾಪಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಮೂರು ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, 70 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಪರೀಕ್ಷೆ ಸಂಬಂಧ ಅಕ್ರಮ ಎಸಗಲು ಯತ್ನಿಸಿದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರೆಲ್ಲರೂ ಚಪ್ಪಲಿಯ ಸೋಲ್ನಲ್ಲಿ ಬ್ಯೂಟೂತ್ ಡಿವೈಸ್ ಅಳವಡಿಸಿಕೊಂಡಿದ್ದರು.
ಇದರ ಹಿಂದೆ ಜಾಲವೊಂದು ಸಕ್ರಿಯವಾಗಿದ್ದು, ಈ ಜಾಲ ಬ್ಲೂಟೂತ್ ಚಪ್ಪಲಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿತ್ತು. ಒಂದು ಜೊತೆ ಚಪ್ಪಲಿಗೆ ಆರು ಲಕ್ಷ ರೂ. ಹಣ ಪಡೆಯಲಾಗುತ್ತಿತ್ತು ಎನ್ನಲಾಗಿದೆ.