ಪಂಜಾಬ್: ಪಂಜಾಬ್ ನ ಫರೀದ್ ಕೋಟ್ ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೋರ್ವ ಗೆಳತಿಯ ಪರೀಕ್ಷೆ ಬರೆಯಲು ಹೆಣ್ಣು ವೇಷ ತೊಟ್ಟು ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಫಾಜಿಲ್ಕಾ ಮೂಲದ ಆಂಗ್ರೇಜ್ ಸಿಂಗ್ ಬಂಧಿತ ಆರೋಪಿ.
ಬಾಬಾ ಫರೀದ್ ಹೆಲ್ತ್ ಯೂನಿವರ್ಸಿಟಿಯಲ್ಲಿ ಮಲ್ಟಿ ಪರ್ಪಸ್ ಹೆಲ್ತ್ ವರ್ಕರ್ ಹುದ್ದೆಗೆ ಪರೀಕ್ಷೆ ಬರೆಯಲು ಆಂಗ್ರೇಸ್ ಸಿಂಗ್ ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್ ಗೆ ಬಂದಿದ್ದ.
ಬಯೋಮೆಟ್ರಿಕ್ ಪರಿಶೀಲನೆ ವೇಳೆ ಸಿಕ್ಕಿಬಿದ್ದಿದ್ದಾನೆ. ಬೆರಳಚ್ಚು ಹೊಂದಿಕೆಯಾಗದಿದ್ದಾಗ ಅಧಿಕಾರಿಗಳಿಗೆ ವಂಚನೆ ಅರಿವಾಗಿದೆ.
ಇನ್ವಿಜಿಲೇಟರ್ ಕೈಗೆ ಸಿಕ್ಕಿಬೀಳುವುದನ್ನು ತಪ್ಪಿಸಲು ಯುವಕ ಮಹಿಳೆಯ ವೇಷದಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಇದರ ಜೊತೆಗೆ ಮತದಾರರ ಗುರುತಿನ ಚೀಟಿ, ಆಧಾರ್ ಸೇರಿದಂತೆ ಗುರುತಿನ ಚೀಟಿಗಳನ್ನು ನಕಲಿ ಮಾಡಲಾಗಿತ್ತು, ಮಹಿಳೆಯರ ಬಟ್ಟೆಯ ಹೊರತಾಗಿ, ತುಟಿಗಳಿಗೆ ಲಿಪ್ಸ್ಟಿಕ್, ಬಳೆಗಳನ್ನು ಧರಿಸಿದ್ದ.
ಪೊಲೀಸರು ಆಂಗ್ರೇಸ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪರಮ್ಜಿತ್ ಕೌರ್ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.