Categories: ಪಂಜಾಬ್

ಸೊಸೆಯ ಅಕ್ರಮ ಸಂಬಂಧಕ್ಕೆ ಬಲಿಯಾದ ಮಾಜಿ ಸೈನಿಕ ದಂಪತಿ

ಹೊಸಿಯಾರ್‌ಪುರ (ಪಂಜಾಬ್​) : ಅಕ್ರಮ ಸಂಬಂಧ ಹೊಂದಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರನ ಜತೆಗೂಡಿ ಅತ್ತೆ-ಮಾವನನ್ನು ಸುಟ್ಟು ಕೊಂದಿರುವ ಭಯಾನಕ ಘಟನೆ ಪಂಜಾಬ್‌ನ ಹೋಷಿಯಾರಪುರದ ಜಾಜಾ ಎಂಬಲ್ಲಿ ನಡೆದಿದೆ.

ತಾವು ಅಕ್ರಮ ಸಂಬಂಧ ಹೊಂದಿರುವುದು ಅತ್ತೆ ಮಾವಂದಿರಿಗೆ ತಿಳಿಯುತ್ತಲೇ ಈ ಕೃತ್ಯ ಎಸಗಿದ್ದಾಳೆ ಪಾಪಿ ಸೊಸೆ! ಇಂಥದ್ದೊಂದು ಕೃತ್ಯ ಎಸಗಿದವಳು ಮನದೀಪ್‌ ಕೌರ್‌. ಈಕೆ ಹಾಗೂ ಈಕೆಯ ಪ್ರಿಯಕರ ಜಸ್ಮೀತ್‌ ಸಿಂಗ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಪ್ರಾಣ ಕಳೆದುಕೊಂಡವರು ಮಾಜಿ ಸೈನಿಕ ಜಸ್ವಂತ್ ಸಿಂಗ್ ಮತ್ತು ಪತ್ನಿ ಗುರ್ಮೀತ್ ಕೌರ್.

ಮನದೀಪ್‌ ಕೌರ್‌ ಪತಿ ರವೀಂದರ್‌ ಸಿಂಗ್‌ ಮನೆಯಲ್ಲಿ ಇರಲಿಲ್ಲ. ಸಂಜೆಯ ವೇಳೆ ಅವರು ಮನೆಗೆ ಬಂದಾಗ ಬಾಗಿಲು ಲಾಕ್‌ ಆಗಿತ್ತು. ಎಷ್ಟು ಕೂಗಿದರೂ ಯಾರೂ ಬಾಗಿಲು ತೆರೆಯಲಿಲ್ಲ. ಇದರಿಂದ ಆತಂಕಗೊಂಡ ಅವರು, ಹಿಂಬಾಲಿಗಿನ ಗೋಡೆಯನ್ನು ಹತ್ತಿ ಅಲ್ಲಿಂದ ಮನೆಯೊಳಕ್ಕೆ ಪ್ರವೇಶ ಮಾಡಿದ್ದಾರೆ.

ಈ ಸಂದರ್ಭದಲ್ಲಿ ರವೀಂದರ್‌ ತಮ್ಮ ಪತ್ನಿ ಮನದೀಪ್‌ಳನ್ನು ಯಾರೋ ಕಟ್ಟಿಹಾಕಿರುವುದು ನೋಡಿದ್ದಾರೆ. ಏಕೆಂದರೆ ಆಕೆಯನ್ನು ಖುರ್ಚಿಗೆ ಕಟ್ಟಿಹಾಕಿದಂತಿತ್ತು. ಜೋರಾಗಿ ಅತ್ತ ಮನದೀಪ್‌ ಯಾರೋ ಮನೆಯೊಳಕ್ಕೆ ಪ್ರವೇಶಿಸಿ ತನ್ನನ್ನು ಕಟ್ಟಿಹಾಕಿ ಅತ್ತೆ- ಮಾವಂದಿರ ಮೇಲೆ ಹಲ್ಲೆ ಮಾಡಿರುವುದಾಗಿ ಹೇಳಿದ್ದಾಳೆ.

ದಿಗಿಲುಗೊಂಡ ರವೀಂದರ್‌ ಮತ್ತೊಂದು ಕೋಣೆಯ ಒಳಗೆ ನೋಡಿದಾಗ ಅವರ ಅಪ್ಪ-ಅಮ್ಮನ ಶವ ಅರೆ ಸುಟ್ಟ ಸ್ಥಿತಿಯಲ್ಲಿ ಕಂಡಿತ್ತು. ಕೋಣೆಯ ತುಂಬ ಹೊಗೆ ಆವರಿಸಿತ್ತು. ಮನದೀಪ್‌ ಜೋರಾಗಿ ಅಳುವಂತೆ ನಾಟಕ ಮಾಡುತ್ತಿದ್ದಳು. ಪತ್ನಿಯ ಮಾತನ್ನು ನಂಬಿದ್ದ ರವೀಂದರ್‌ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಯಾರೋ ಮನೆಯೊಳಕ್ಕೆ ನುಗ್ಗಿ ತಮ್ಮ ಪತ್ನಿಯನ್ನು ಕಟ್ಟಿಹಾಕಿ ನಂತರ ಅಪ್ಪ-ಅಮ್ಮನ ಕೊಲೆ ಮಾಡಿದ್ದಾರ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಪೊಲೀಸರು ತನಿಖೆ ಕೈಗೊಂಡಾಗ ಏನೋ ಎಡವಟ್ಟು ಆದಂತೆ ಕಂಡಿತು. ತಜ್ಞರ ತಂಡ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳೂ ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಇದು ಹೊರಗಿನವರು ಮಾಡಿದ ಕೃತ್ಯವಲ್ಲ ಎನ್ನುವುದು ಸ್ಪಷ್ಟವಾಯಿತು. ಘಟನೆ ಕುರಿತು ಮನದೀಪ್‌ ಕೌರ್‌ಳನ್ನು ಬೇರೆ ಬೇರೆ ರೀತಿಯಲ್ಲಿ ವಿಚಾರಿಸಿದಾಗ ಆಕೆ ನೀಡುತ್ತಿರುವ ಮಾಹಿತಿ ಒಂದಕ್ಕೊಂದು ತಾಳಮೇಳ ಇಲ್ಲದಂತೆ ತನಿಖಾಧಿಕಾರಿಗಳಿಗೆ ಕಂಡಿತು.

ನಂತರ ಆಕೆಯ ಮೇಲೆ ಸಂದೇಹ ಬಲವಾಗುತ್ತಿದ್ದಂತೆಯೇ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ಮಾಡಿದ್ದಾರೆ. ಆಗ ಹೆದರಿದ ಈಕೆ ಸತ್ಯ ಬಾಯಿ ಬಿಟ್ಟಿದ್ದಾಳೆ. ತಾನು ಪ್ರಿಯಕರನ ಜತೆಗೂಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಅತ್ತೆ-ಮಾವನನ್ನು ಕತ್ತು ಹಿಸುಕಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹಕ್ಕೆ ಬೆಂಕಿ ಇಟ್ಟಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಕೊಲೆ ಮಾಡಿದ ಬಳಿಕ ಆಕೆಯ ಪ್ರಿಯತಮ ಮನೆಯಲ್ಲಿದ್ದ 19 ತೊಲೆ ಚಿನ್ನ ಮತ್ತು 45 ಸಾವಿರ ರೂ. ದೋಚಿಕೊಂಡು ಹೋಗಿದ್ದ. ನಂತರ ಆತನನ್ನೂ ಬಂಧಿಸಿರುವ ಪೊಲೀಸರು ಕೊಲೆಗೆ ಬಳಸಿದ್ದ ಚಾಕು ಮತ್ತು ಬೈಕ್​ನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Gayathri SG

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

4 hours ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

4 hours ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

4 hours ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

4 hours ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

5 hours ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

5 hours ago