News Karnataka Kannada
Wednesday, April 24 2024
Cricket
ಪಂಜಾಬ್

 ತಂದೆಯಿಂದಲೆ ಮಗಳ ಮೇಲೆ ಮಾರಣಾಂತಿಕ ಹಲ್ಲೆ

Untitled 222
Photo Credit :

ಪಂಜಾಬ್: ಎಂಟು ವರ್ಷದ ಬಾಲಕಿಗೆ ಆಕೆಯ ತಂದೆಯೇ ಮೃಗೀಯವಾಗಿ ಥಳಿಸಿರುವ ಘಟನೆ ವರದಿಯಾಗಿದೆ.

ಬಟಿಂಡಾ ಜಿಲ್ಲೆಯ ರಾಂಪುರ ಗ್ರಾಮದ ನಿರ್ಮಲ್ ಸಿಂಗ್ ಎಂಬುವವರು ತನ್ನ 8 ವರ್ಷದ ಮಗಳು ಮನ್‌ಪ್ರೀತ್‌ಗೆ ನಿರ್ದಯವಾಗಿ ಥಳಿಸಿದ್ದಾನೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

8 ವರ್ಷದ ಬಾಲಕಿಗೆ ತಂದೆಯಿಂದ ಮಾರಣಾಂತಿಕ ಥಳಿತ: ಭಯಾನಕ ವಿಡಿಯೋ
ಅಲ್ಲದೇ ವಿಡಿಯೋದಲ್ಲಿ ಪಾಪಿ ತಂದೆ ಬಟ್ಟೆಯಿಂದ ಬಾಲಕಿಯ ಕತ್ತು ಹಿಸುಕಲು ಯತ್ನಿಸಿದ್ದಾನೆ. ಯಾರೋ ನಗುತ್ತಾ ಇಡೀ ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ನಂತರ ಅವರೇ ಆತನನ್ನು ತಡೆದಿದ್ದಾರೆ ಎಂದು ಹೇಳಲಾಗುತ್ತದೆ. ಲಭ್ಯವಿರುವ ಮಾಹಿತಿ ಪ್ರಕಾರ ಬಾಲಕಿಯ ತಾಯಿ ವಿಡಿಯೋ ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ತಂದೆಯೊಬ್ಬ ಮಗಳ ಕತ್ತು ಹಿಸುಕಲು ಯತ್ನಿಸಿ, ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು