News Karnataka Kannada
Friday, April 19 2024
Cricket
ದೇಶ

ಪೂನಂ ಪಾಂಡೆ ಸಾವಿಗೆ ಕಾರಣವಾದ ಗರ್ಭಕಂಠ ಕ್ಯಾನ್ಸರ್ ಎಷ್ಟು ಡೇಂಜರ್ ಗೊತ್ತ ?

Poonam (1)
Photo Credit : News Kannada

ಮುಂಬೈ:  ಪೂನಂ ಪಾಂಡೆ ಕಳೆದ 9 ವರ್ಷಗಳಿಂದ ಮಹಾಮಾರಿ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅಂದ್ಹಾಗೆ ಬಾಲಿವುಡ್​ ನಟಿಯನ್ನು ಕಾಡಿದ್ದು Cervical Cancer (ಗರ್ಭಕಂಠ ಕ್ಯಾನ್ಸರ್​). ಇದರ ವಿರುದ್ಧ ಸುದೀರ್ಘ ಹೋರಾಟ ನಡೆಸುತ್ತಿದ್ದ ಪಾಂಡೆ, ಚಿಕಿತ್ಸೆ ಫಲಿಸದೇ ಸಾವಿಗೆ ಶರಣಾಗಿದ್ದಾರೆ ಎಂದು ಅವರ ಮ್ಯಾನೇಜರ್ ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ.

ಗರ್ಭಕಂಠ ಕ್ಯಾನ್ಸರ್ ಎಂಬುವುದು ಗರ್ಭಕಂಠದ ದ್ವಾರ, ಅದರ ಸುತ್ತ ಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆ. ಅಂದರೆ ಗರ್ಭಕಂಠದ ಮೇಲಿನ ಜೀವಕೋಶಗಳ ಅಸಾಮಾನ್ಯ ಹಾಗೂ ಅಸ್ವಾಭಾವಿಕ ಬೆಳವಣಿಗೆಯೇ ಗರ್ಭಕಂಠದ ಕ್ಯಾನ್ಸರ್. ಈ ಕ್ಯಾನ್ಸರ್​ಗೆ ಹ್ಯೂಮನ್ ಪ್ಯಾಪಿಲೋಮ್ ವೈರಸ್ (HPV) ಎಂಬ ಸೋಂಕು ಕಾರಣವಾಗಿದೆ.

ಈ ಸೋಂಕು ಲೈಂಗಿಕವಾಗಿ ಸಕ್ರಿಯರಾಗಿರುವ ಯಾವುದೇ ವಯಸ್ಸಿನವರಲ್ಲೂ ಕಂಡುಬರಬಹುದು. ತೀರಾ ಎಳೆಯ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆ ನಡೆಸುವುದರಿಂದ ಹಾಗೂ ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿ ಇರೋರಲ್ಲಿ ಅಧಿಕವಾಗಿ ಕಂಡು ಬರುತ್ತದೆ. HPV ಸೋಂಕಿನಲ್ಲಿ ಸಾಕಷ್ಟು ತಳಿಗಳಿದ್ದು ಎಲ್ಲವೂ ಕೂಡ ಕ್ಯಾನ್ಸರ್ ಆಗಲು ಕಾರಣವಾಗುವುದಿಲ್ಲ. HPV ಸೋಂಕು ಕ್ಯಾನ್ಸರ್​ ಆಗಿ ಪರಿವರ್ತನೆಯಾಗಲು ಬರೋಬ್ಬರಿ 15 ರಿಂದ 20 ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ಅಸುರಕ್ಷಿತ ಹೆರಿಗೆ ಸಮಯದಲ್ಲಿ ಆಗುವ ಗಾಯದಿಂದಲೂ ಇದು ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಗರ್ಭಕೊರಳು ಕ್ಯಾನ್ಸರ್​​ನ ಪ್ರಮುಖ ಲಕ್ಷಣಗಳನ್ನು ನೋಡೋದಾದ್ರೆ ಬಳಿ ಮುಟ್ಟು ಅಥವಾ ಕೆಂಪು ಮುಟ್ಟು ಹೋಗುವುದು. ಕಿಬ್ಬೊಟ್ಟೆ ಅಥವಾ ಸೊಂಟದ ಕೆಳಭಾಗದಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಅನಿಯಮಿತ ಋತುಸ್ರಾವ ಆಗುತ್ತದೆ.

ಸ್ಕ್ರೀನಿಂಗ್ ಪರೀಕ್ಷೆಗಳು ಮತ್ತು HPV ಲಸಿಕೆ ಗರ್ಭಕಂಠದ ಕ್ಯಾನ್ಸರ್‌ನ್ನು ತಡೆಯಲು ಸಹಾಯ ಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್‌ನ್ನು ಮೊದಲೇ ಪತ್ತೆ ಮಾಡಿದಾಗ, ಇದು ಚಿಕಿತ್ಸೆ ಪಡೆದುಕೊಳ್ಳಲು ಸುಲಭ. ಇಲ್ಲದಿದ್ದರೆ ಜೀವಕ್ಕೇ ಸಂಚಕಾರವಾಗಿ ಪರಿಣಮಿಸುತ್ತದೆ. ಗರ್ಭಕಂಠದ ಕ್ಯಾನ್ಸರ್‌ (ಸರ್ವಿಕಲ್‌ ಕ್ಯಾನ್ಸರ್‌) ತಡೆಗೆ 9 ರಿಂದ 14 ವರ್ಷದೊಳಗಿನ ಬಾಲಕಿಯರು ಲಸಿಕೆ ಹಾಕಿಸಿಕೊಳ್ಳುವಂತೆ ಕೇಂದ್ರ ಸರ್ಕಾರ ಉತ್ತೇಜಿಸಲಿದೆ ಎಂದು ಕಳೆದ ದಿನವಷ್ಟೇ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್‌ 2024-25ನೇ ಸಾಲಿನ ಬಜೆಟ್‌ ಮಂಡನೆ ವೇಳೆ ತಿಳಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು