ದುಬೈ: ಇಂದು ದುಬೈನಲ್ಲಿ ನಡೆಯಲಿರುವ COP -28 ರ ವಿಶ್ವ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ನಿಲ್ದಾಣ ತಲುಪಿದ್ದಾರೆ.
ವಾರ್ಷಿಕ ಹವಾಮಾನ ಶೃಂಗಸಭೆಯು ದುಬೈನಲ್ಲಿ ನಿನ್ನೆ ಪ್ರಾರಂಭವಾಗಿದ್ದು ಇಂದು ಮುಕ್ತಾಯಗೊಳ್ಳಲಿದೆ. ಈ ನಡುವೆ ದುಬೈ ಸರ್ಕಾರದ ಗಣ್ಯರಿಂದ ಸ್ವಾಗತ ಸ್ವೀಕರಿಸಿ ನೇರವಾಗಿ ಅನಿವಾಸಿ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳಿದರು.
ಹಲವಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಅನಿವಾಸಿ ಭಾರತೀಯರ ತಂಡ ಮೋದಿಗೆ ಅದ್ಧೂರಿ ವೆಲ್ಕಂ ನೀಡುವುದರ ಮುಖೇನ ಮುಂದಿನ ಬಾರಿ 400 ಕ್ಕೂ ಅಧಿಕ ಸೀಟುಗಳಿಂದ ಗೆಲ್ಲುವಂತೆ ಶುಭ ಹಾರೈಸಿದರು.
Deeply moved by the warm welcome from the Indian community in Dubai. Their support and enthusiasm is a testament to our vibrant culture and strong bonds. pic.twitter.com/xQC64gcvDJ
— Narendra Modi (@narendramodi) November 30, 2023