News Karnataka Kannada
Sunday, April 14 2024
Cricket
ದೇಶ

ಪೇಟಿಯಂ ಬಳಕೆದಾರರ ಗಮನಕ್ಕೆ: ಇಂದಿನಿಂದ ಈ ಸೇವೆಗಳು ಸ್ಥಗಿತ

Paytm
Photo Credit : News Kannada

ದೆಹಲಿ: ಪೇಟಿಯಂ ಪೇಮೆಂಟ್​​ ಬ್ಯಾಂಕ್​ ಲಿಮಿಡೆಟ್​​ ಇಂದಿನಿಂದ ಪ್ರಮುಖ ಸೇವೆಯನ್ನು ನಿಲ್ಲಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್​ ನಿಯಮಾನುಸಾರ ನಿಯಮ ಉಲ್ಲಂಘಿಸಿದ್ದ ಕಾರಣ ಡಿಜಿಟಲ್​ ಪೇಮೆಂಟ್​ ಆ್ಯಪ್​ ತನ್ನ ಸೇವೆಯನ್ನು ಕೊನೆಗೊಳಿಸುತ್ತಾ ಬರುತ್ತಿದೆ. ಅಂದಹಾಗೆಯೇ ಸದ್ಯ ಪೇಟಿಯಂನಲ್ಲಿ ಕೆವೊಂದು ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ.

ಇನ್ಮುಂದೆ ಪೇಟಿಯಂ ಪೇಮೆಂಟ್​ ಗ್ರಾಹಕರು ಇನ್ಮುಂದೆ ತಮ್ಮ ಖಾತೆಗಳಿಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಹಣ ಹಿಂಪಡೆಯಬಹುದು ಮತ್ತು ವರ್ಗಾಯಿಸಬಹುದು.
ಪೇಟಿಯಂ ಮೂಲಕ ನೇರ ಲಾಭ ವರ್ಗಾವಣೆ, ಸಬ್ಸಿಡಿ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಪಾಲುದಾರ ಬ್ಯಾಂಕ್​ಗಳಿಂದ ಮರುಪಾವತಿ, ಕ್ಯಾಶ್​ಬ್ಯಾಕ್​ ಪಡೆಯಬಗಹುದು.
ಪೇಟಿಯಂ ವ್ಯಾಲೆಟ್​​ನಿಂದ ಹಣ ವರ್ಗಾಯಿಸಲು ಸಾಧ್ಯವಾಗದು. ಆದರೆ ಬಿಲ್​ ಪಾಪತಿಸಲು ವ್ಯಾಲೆಟ್​ನಲ್ಲಿದ್ದ ಹಣವನ್ನು ಬಳಸಬಹುದು.
ಪೇಟಿಯಂ ಬ್ಯಾಂಕ್​ ನೀಡಿದ ಫಾಸ್ಟ್​ಟ್ಯಾಗ್​ ರೀಚಾರ್ಜ್​ ಮಾಡಲು ಆಗುವುದಿಲ್ಲ.
NCMC ಕಾರ್ಡ್​ (ನ್ಯಾಷನಲ್​ ಕಾಮನ್​ ಮೊಬಿಲಿಟಿ ಕಾರ್ಡ್​) ರೀಚಾರ್ಜ್​ ಮಾಡಲು ಸಾಧ್ಯವಾಗುವುದಿಲ್ಲ.
ಯುಪಿಐ ಅಥವಾ ಐಎಮ್​ಪಿಎಸ್​ ಮೂಲಕ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.
ಚಂದಾದಾರಿಕೆಗಳಿಗೆ ಪಾವತಿಸಲು ಪೇಟಿಯಂ ಬ್ಯಾಲೆನ್ಸ್​ ಅನ್ನು ಬಳಸಬಹುದಾಗಿದೆ. ಆದರೆ ಮಾರ್ಚ್​ 15ರಿಂದ ಬೇರೆ ಬ್ಯಾಂಕ್​ ಖಾತೆ ಬಳಸಬೇಕಾಗುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು