News Karnataka Kannada
Saturday, April 13 2024
Cricket
ದೇಶ

ವಿಪಕ್ಷಗಳ ಒಕ್ಕೂಟ ಇಂಡಿಯಾ ಅಲ್ಲ ಈಸ್ಟ್‌ ಇಂಡಿಯಾ: ಬಿಜೆಪಿ ಟಾಂಗ್‌

Bengaluru: BJP announces list of 189 candidates
Photo Credit : News Kannada

ಪಾಟ್ನಾ: 26 ವಿರೋಧ ಪಕ್ಷಗಳು ‘ಇಂಡಿಯಾ’ ಎಂಬ ಹೊಸ ಬ್ಯಾನರ್ ಅಡಿಯಲ್ಲಿ ಒಗ್ಗೂಡಿರುವ ಬಗ್ಗೆ ಬಿಜೆಪಿ ನಾಯಕ ಟಾಂಗ್‌ ನೀಡಿದ್ದು, ಅವರ ಒಕ್ಕೂಟ ಇಂಡಿಯಾ ಅಲ್ಲ ಈಸ್ಟ್‌ ಈಸ್ಟ್ ಇಂಡಿಯಾ ಕಂಪನಿಯಾಗಿದೆ ಎಂದು ಹೇಳಿದ್ದಾರೆ.

ಬ್ರಿಟಿಷರು ‘ಈಸ್ಟ್ ಇಂಡಿಯಾ ಕಂಪನಿ’ ಮಾಡಿ ದೇಶವನ್ನು ಲೂಟಿ ಮಾಡಿದ ರೀತಿ, ದೇಶವನ್ನು ಲೂಟಿ ಮಾಡಲು ಭ್ರಷ್ಟರೆಲ್ಲ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಈಸ್ಟ್ ಇಂಡಿಯಾ ಕಂಪನಿಯು ದೇಶವನ್ನು ಲೂಟಿ ಮಾಡಿದೆ. ಅದೇರೀತಿ ಕಾಂಗ್ರೆಸ್‌ ಒಕ್ಕೂಟ ದೇಶವನ್ನು ಮತ್ತೊಮ್ಮೆ, ಮಗದೊಮ್ಮೆ ಲೂಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತ, ಇಂಡಿಯಾ ಎಂದು ಯಾವ ಹೆಸರಿಟ್ಟುಕೊಂಡು ನಾಟಕ ಮಾಡಿದರೂ ದೇಶದ ಜನತೆ ಅವರನ್ನು ಕ್ಷಮಿಸುವುದಿಲ್ಲ ಎಂದರು.

ಕೆಲವು ವರ್ಷಗಳ ಹಿಂದೆ, ಸ್ಪೆಷಲ್ 26 ಎಂಬ ಹೆಸರಿನೊಂದಿಗೆ ಚಲನಚಿತ್ರವೊಂದು ಬಿಡುಗಡೆಯಾಗಿತ್ತು. ವಿರೋಧ ಪಕ್ಷದ ನಾಯಕರು ದೇಶದಲ್ಲಿ ಅದನ್ನೇ ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಚೌಬೆ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು