ಒಡಿಸ್ಸಾ

ಒಡಿಶಾದಲ್ಲಿ ಮತ್ತೊಂದು ಭೀಕರ ರೈಲು ದುರಂತ: ರೈಲ್ವೆ ಕೋಚ್‌ ಕೆಳಗೆ ಸಿಲುಕಿ ನಾಲ್ವರು ಸಾವು

ಭುವನೇಶ್ವರ್: ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಕೆಲವೇ ದಿನಗಳ ಅಂತರದಲ್ಲಿ ಎಂಜಿನ್‌ ರಹಿತ ಗೂಡ್ಸ್ ರೈಲ್ವೆ ಕೋಚ್‌ ಅಡಿಗೆ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ.

ಬುಧವಾರ ಜಾಜ್‌ಪುರ-ಕಿಯೋಂಜಾರ್ ರಸ್ತೆ ನಿಲ್ದಾಣದ ಬಳಿ ಈ ಭಯಾನಕ ಘಟನೆ ನಡೆದಿದ್ದು, ನಾಲ್ವರು ಘಟನೆಯಲ್ಲಿ ಸಾವನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರೈಲ್ವೆ ಗುತ್ತಿಗೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಭಾರಿ ಮಳೆ ಮತ್ತು ಗಾಳಿಯ ಕಾರಣ ಎಂಜಿನ್‌ ರಹಿತ ರೈಲ್ವೆ ವ್ಯಾಗನ್‌ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಇದ್ದಕ್ಕಿದ್ದಂತೆ ರೈಲ್ವೆ ವ್ಯಾಗನ್‌ ಚಲಿಸಲು ಆರಂಭಿಸಿದೆ.

ಈ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ಕು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಕೋಚ್‌ ನಲ್ಲಿ ಮಳೆಗಾಲದ ನಿರ್ವಹಣೆಗೆ ಅಗತ್ಯ ವಸ್ತುಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ.

Sneha Gowda

Recent Posts

ಬಂಟ್ವಾಳ ಜಮೀಯ್ಯತುಲ್ ಫಲಾಹ್, ರೋಟರಿ ಕ್ಲಬ್ ನಿಂದ “ಮೆಹ್’ಫಿಲೇ ಈದ್”

 ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ, ರೋಟರಿ ಕ್ಲಬ್ ಬಂಟ್ವಾಳ, ಉಪ್ಪಿನಂಗಡಿ, ಬಂಟ್ವಾಳ ಟೌನ್ ಹಾಗೂ ವಿಟ್ಲ ಘಟಕದ ಸಹಯೋಗದಲ್ಲಿ ಮೆಹ್'ಫಿಲೇ…

4 mins ago

ಸಂಧಿವಾತದ ಸಮಸ್ಯೆಗೆ ಬಿಸಿನೀರ ಬಳಕೆ ಒಳ್ಳೆಯದು!

ಕೈಕಾಲು ಎಳೆತದಂತಹ ಕಾಯಿಲೆ ಅರ್ಥಾತ್ ಸಂಧಿವಾತ ಹೆಚ್ಚು ನೀರಲ್ಲಿ ಕೆಲಸ ಮಾಡುವವರನ್ನು ಇಲ್ಲಿಲ್ಲದಂತೆ ಕಾಡುತ್ತದೆ. ಅದರಲ್ಲೂ ಶೀತ ಪ್ರದೇಶದಲ್ಲಿ ಕೆಲಸ…

18 mins ago

ಇನ್‌ಸ್ಟಾ ಲೈವ್‌ಗೋಸ್ಕರ ಕಾರಿನ ಸ್ಪೀಡ್‌ ಹೆಚ್ಚಿಸಿದ ಸ್ನೇಹಿತ : ನಾಲ್ವರ ದುರ್ಮರಣ

ಇನ್‌ಸ್ಟಾಗ್ರಾಮ್‌ ಲೈವ್‌ ಮಾಡವುದಕ್ಕಾಗಿ ಸ್ನೇಹಿತ ಕಾರಿನ ವೇಗವನ್ನು ಹೆಚ್ಚಿಸಿದ್ದು ನಂತರ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದ್ದು ನಾಲ್ವರು ಸಾವನಪ್ಪಿದ್ದು…

23 mins ago

ಮಳೆಗಾಗಿ ಕತ್ತೆಗೆ ಮದುವೆ ಮಾಡಿದ ಗ್ರಾಮಸ್ಥರು

ಮಳೆ  ಇಲ್ಲದೆ ಬರ ಪರಿಸ್ಥಿರಿ ಎದುರಾಗಿದ್ದು,  ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎಲ್ಲ ಸೇರಿಕೊಂಡು ಕತ್ತೆಗಳಿಗೆ ಮದುವೆ ಮಾಡಿ ವರುಣರಾಯನಿಗಾಗಿ ಪ್ರಾರ್ಥಿಸಿದ…

30 mins ago

ಜುಲೈ ಅಂತ್ಯದ ವೇಳೆಗೆ ನಾಗಸಂದ್ರ, ಮಾದಾವರದ ನಡುವೆ ಮೆಟ್ರೋ ಆರಂಭ

ಪಂಚವಾರ್ಷಿಕ ಯೋಜನೆಯಾಗಿ ಉಳಿದಿದ್ದ ನಮ್ಮ ಮೆಟ್ರೋ ಹಸಿರು ಕಾರಿಡಾರ್​ನ ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಮಾರ್ಗ  ಜುಲೈ…

42 mins ago

ವೃದ್ಧನ ಅನ್ನನಾಳದಲ್ಲಿ ಸಿಲುಕಿದ್ದ ಮಟನ್ ಮೂಳೆಯನ್ನು ಹೊರತೆಗೆದ ವೈದ್ಯರು

ಎಲ್‌ಬಿ ನಗರದ ಕಾಮಿನೇನಿ ಆಸ್ಪತ್ರೆಯ ವೈದ್ಯರು 66 ವರ್ಷದ ರೋಗಿಯ ಹೃದಯದ ಬಳಿ ಅನ್ನನಾಳದಲ್ಲಿ ಸಿಲುಕಿದ್ದ ಮಟನ್ ಮೂಳೆಯನ್ನು ಯಶಸ್ವಿಯಾಗಿ…

51 mins ago