ಒಡಿಶಾ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು (64) ಅವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಕಮಾಂಡೋಗಳಿಂದ ಝಡ್ ಪ್ಲಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಈ ಕುರಿತು ಕೇಂದ್ರ ಗೃಹ ಸಚಿವಾಲಯ ಸಿಆರ್ಪಿಎಫ್ಗೆ ನಿರ್ದೇಶನ ನೀಡಿದ್ದು, 14ರಿಂದ16 ಅರೆಸೇನಾ ಪಡೆ ಸಿಬ್ಬಂದಿ ಮುರ್ಮು ಅವರ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ಒಡಿಶಾದ ರಾಯರಂಗಪುರದಲ್ಲಿರುವ ಆಕೆಯ ನಿವಾಸ ಸೇರಿದಂತೆ ದೇಶದಲ್ಲಿ ಮುರ್ಮು ಎಲ್ಲೇ ಹೋದರೂ ಭದ್ರತಾ ಸಿಬ್ಬಂದಿ ಅವರ ಜೊತೆಗಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ವಿವಿಧ ನಾಯಕರನ್ನು ಭೇಟಿ ಮಾಡಲು ಮುರ್ಮು ಶೀಘ್ರದಲ್ಲೇ ಹಲವಾರು ರಾಜ್ಯಗಳಿಗೆ ಪ್ರವಾಸ ಮಾಡುವ ಸಾಧ್ಯತೆಯಿದೆ. ರಾಷ್ಟ್ರಪತಿ ಚುನಾವಣೆ ನಡೆಯುವವರೆಗೂ ಮುರ್ಮು ಅವರಿಗೆ 14-16 ಅರೆಸೇನಾ ಪಡೆ ಸಿಬ್ಬಂದಿ ಕಾವಲು ಕಾಯಲಿದ್ದಾರೆ.