News Karnataka Kannada
Saturday, April 13 2024
Cricket
ಒಡಿಸ್ಸಾ

100ರೂಪಾಯಿಗೋಸ್ಕರ ತಾಯಿಯನ್ನೇ ಕೊಂದ ಪಾಪಿ

Untitled 36
Photo Credit :

ಒಡಿಶಾ : ವಿಲಕ್ಷಣ ಘಟನೆಯೊಂದರಲ್ಲಿ, ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ಮದ್ಯ ಖರೀದಿಸಲು 100 ರೂಪಾಯಿ ನೀಡದ ಕಾರಣಕ್ಕೆ ಆಕೆಯ ಮಗ ಮಹಿಳೆಯನ್ನು ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು (Police) ಶನಿವಾರ ತಿಳಿಸಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಜಶಿಪುರದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, 21 ವರ್ಷದ ಸರೋಜ್ ನಾಯಕ್ (Saroj Nayak) ಮದ್ಯ ಖರೀದಿಸಲು ತನ್ನ ತಾಯಿ ಸಾಲಂದಿ ನಾಯಕ್‌ಗೆ 100 ರೂ. ಕೇಳಿದ್ದಾನೆ. ಆದರೆ, ಅವರ ತಾಯಿಗೆ ಮೊತ್ತವನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಇದರಿಂದ ಕುಪಿತಗೊಂಡ ಸರೋಜ ತನ್ನ ತಾಯಿಯನ್ನು ನಿರಂತರವಾಗಿ ಥಳಿಸಲು ಆರಂಭಿಸಿದ್ದು ಆಕೆಯ ಸಾವಿಗೆ ಕಾರಣವಾಯಿತು. ಕೃತ್ಯ ಎಸಗಿದ ಬಳಿಕ ಆರೋಪಿ ಸರೋಜ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಜಾಶಿಪುರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ. “ಘಟನೆ ಸಂಭವಿಸಿದಾಗ ನಾನು ಮನೆಯಲ್ಲಿ ಇರಲಿಲ್ಲ.

ಶುಕ್ರವಾರ ರಾತ್ರಿ 9.30 ಗಂಟೆಗೆ ನನ್ನ ತಾಯಿಯನ್ನು ನನ್ನ ಕಿರಿಯ ಸಹೋದರ ತೀವ್ರವಾಗಿ ಹಲ್ಲೆ ಮಾಡಿದ್ದಾನೆ ಎಂದು ನನಗೆ ಕರೆ ಬಂದಿತು, ನಾನು ರಾತ್ರಿ 11 ಗಂಟೆಗೆ ಮನೆಗೆ ತಲುಪಿ ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದೇನೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಮೃತ ಮಹಿಳೆಯರ ಹಿರಿಯ ಮಗ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು