News Karnataka Kannada
Monday, April 29 2024
ಒಡಿಸ್ಸಾ

10 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪಿಗಳ‌ ಬಂಧನ

Arrest
Photo Credit : News Kannada

 ಒಡಿಶಾ: 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ ವ್ಯಕ್ತಿಗೆ ಸಾಯುವ ವರೆಗೆ ಜೈಲು ಹಾಗೂ ಆತನ ಪತ್ನಿಗೆ 20 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.45 ವರ್ಷದ ಅಮಿತ್‌ ಬಿಂಧಾನಿ ಸ್ಲಂ ಪ್ರದೇಶದಿಂದ ಪತ್ನಿ ಆಶಾ ಲೋಹರ್‌ ಸಹಾಯದಿಂದ ಹುಡುಗಿಯನ್ನು ಅಪಹರಿಸಿದ್ದ.

ಒಡಿಶಾದ ಕತಕ್‌ನ ಪೋಕ್ಸೋ ಕೋರ್ಟ್‌ ದಂಪತಿಗೆ ಶಿಕ್ಷೆಯನ್ನು ಘೋಷಿಸಿದೆ.ಆಶಾಗೆ ₹ 5,000 ದಂಡವನ್ನು ವಿಧಿಸಲಾಗಿತ್ತು, ಭರಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ 6 ವರ್ಷ ಜೈಲು ಶಿಕ್ಷೆಯನ್ನು ನೀಡಲಾಗಿದೆ.

ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ಬಾಲಕಿಯನ್ನು ಇರಿಸಿದ್ದ ಅಮಿತ್‌ 8 ದಿನಗಳ ಕಾಲ ಅತ್ಯಾಚಾರ ನಡೆಸಿದ್ದ. 2019ರ ಜುಲೈನಲ್ಲಿ ಘಟನೆ ನಡೆದಿತ್ತು. ದಂಪತಿಯನ್ನು ಬಂಧಿಸಿ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದರು.

ಪ್ರಕರಣದಲ್ಲಿ 12 ಸಾಕ್ಷಿದಾರರ ಹೇಳಿಕೆ ಮತ್ತು 20ಕ್ಕೂ ಹೆಚ್ಚು ಸಾಕ್ಷ್ಯವಸ್ತುಗಳನ್ನು ಕೋರ್ಟ್‌ ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ. ಸಂತ್ರಸ್ತ ಬಾಲಕಿಗೆ ₹ 5 ಲಕ್ಷ ಪರಿಹಾರ ನೀಡುವಂತೆ ಕೋರ್ಟ್‌ ಆದೇಶಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು