Categories: ಒಡಿಸ್ಸಾ

ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮೂವರು ಯುವತಿಯರು

ಒಡಿಶಾ : ಶನಿವಾರ ಸಂಜೆಯ ಹೊತ್ತಿಗೆ ಇವರು ಮೂರು ಜನ ಒಟ್ಟಿಗೇ ಸಮೀಪದ ಅರಣ್ಯ ಪ್ರದೇಶಕ್ಕೆ ಹೋಗುವುದನ್ನು ನೋಡಿದವರು ಇದ್ದಾರೆ. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ರಾತ್ರಿ 9.30 ಆದರೂ ಹುಡುಗಿಯರು ಬಾರದೆ ಇದ್ದಾಗ ತಕ್ಷಣ ಅವರನ್ನು ಹುಡುಕುತ್ತ ಹೋಗಿದ್ದಾರೆ.

ಒಡಿಶಾದ ನವರಂಗಪುರದಲ್ಲೊಂದು ದುರಂತ ನಡೆದಿದೆ. ಶನಿವಾರ  ಸಂಜೆ ಸುಮಾರು 4.30ಕ್ಕೆ ಒಟ್ಟಿಗೇ ಕಾಡಿಗೆ ಹೋದ ಮೂವರು ಹುಡುಗಿಯರು ರಾತ್ರಿ ಹೊತ್ತಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅದರಲ್ಲೂ ಒಂದೇ ಮರಕ್ಕೆ ಮೂವರೂ ನೇಣು ಬಿಗಿದುಕೊಂಡಿದ್ದಾರೆ. ಅದ್ಯಾಕೆ ಒಟ್ಟಿಗೇ ಕಾಡಿಗೆ ಹೋಗಿ, ಹೀಗೆ ಆತ್ಮಹತ್ಯೆ ಮಾಡಿಕೊಂಡರು ಎಂಬುದು ಬಹುದೊಡ್ಡ ಪ್ರಶ್ನೆ. ಕುಟುಂಬದವರ, ಹೆತ್ತವರು ಆಕ್ರಂದಿಸುತ್ತಿದ್ದಾರೆ. ಊರಲ್ಲಿ ಪ್ರತಿಯೊಬ್ಬರೂ ಶಾಕ್​​ನಲ್ಲಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಶುರುವಿಟ್ಟುಕೊಂಡಿದ್ದಾರೆ. ಮೃತ ಯುವತಿಯರನ್ನು ತೊಹಾರಾ ಎಂಬ ಹಳ್ಳಿಯ ನಿವಾಸಿಗಳಾದ ಹೇಮಲತಾ ಗೌಡಾ (21), ಕೌಸಲ್ಯಾ ಮಜ್ಹಿ (17) ಮತ್ತು ಫುಲಮತಿ ಮಜ್ಹಿ (16) ಎಂದು ಗುರುತಿಸಲಾಗಿದೆ. ಇವರಲ್ಲಿ ಕೌಸಲ್ಯಾ ಮತ್ತು ಫುಲಮತಿ ಇನ್ನೂ ಅಪ್ರಾಪ್ತರೆಂದು ಹೇಳಲಾಗುತ್ತಿದ್ದರೂ, ಉಮೇರಕೋಟೆ ಜಗತ್​ ತಹಸೀಲ್ದಾರ್​ ಜಿಬನ್​ ಚೌಧರಿ ಅದನ್ನು ನಿರಾಕರಿಸಿದ್ದಾರೆ. ಮೃತರೆಲ್ಲರೂ 18 ವರ್ಷ ಮೇಲ್ಪಟ್ಟವರು ಎಂದೇ ಹೇಳುತ್ತಿದ್ದಾರೆ.

ಶನಿವಾರ ಸಂಜೆಯ ಹೊತ್ತಿಗೆ ಇವರು ಮೂರು ಜನ ಒಟ್ಟಿಗೇ ಸಮೀಪದ ಅರಣ್ಯ ಪ್ರದೇಶಕ್ಕೆ ಹೋಗುವುದನ್ನು ನೋಡಿದವರು ಇದ್ದಾರೆ. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ರಾತ್ರಿ 9.30 ಆದರೂ ಹುಡುಗಿಯರು ಬಾರದೆ ಇದ್ದಾಗ ತಕ್ಷಣ ಅವರನ್ನು ಹುಡುಕುತ್ತ ಹೋಗಿದ್ದಾರೆ. ಕಾಡಿನಲ್ಲಿ ಸ್ವಲ್ಪ ಹೊತ್ತು ಹುಡುಕಿದ ಸ್ಥಳೀಯರಿಗೆ ಒಂದೇ ಮರಕ್ಕೆ ಮೂವರ ಶವವನೂ ನೇತಾಡುತ್ತಿರುವ ದೃಶ್ಯ ಕಂಡಿದೆ. ಅದನ್ನು ನೋಡಿ ಹೌಹಾರಿದ ಸ್ಥಳೀಯರು, ಕೂಡಲೇ ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಕುಟುಂಬದ ಸದಸ್ಯರನ್ನು ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಇವರಿಗೆ ಯಾವುದಾದರೂ ಬೇಸರವಾಗಿತ್ತಾ? ಎಂಬಿತ್ಯಾದಿ ಪ್ರಶ್ನೆಗಳನ್ನೂ ಕೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್​​ಪಿ ಸ್ಮಿತ್​ ಪರಶೋತ್ತಮದಾಸ್​ ಪಾರ್ಮರ್​, ನಾವು ಮೃತ ಯುವತಿಯರ ಸಂಬಂಧಿಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶವಗಳನ್ನು ಪೋಸ್ಟ್​ಮಾರ್ಟಮ್​ಗೆ ಕಳಿಸಲಾಗಿತ್ತು. ಇದೊಂದು ಆತ್ಮಹತ್ಯೆ ಎಂಬುದನ್ನು ಪ್ರಾಥಮಿಕ ತನಿಖೆಗಳು ಹೇಳುತ್ತವೆ. ಹಾಗಿದ್ದಾಗ್ಯೂ ಇನ್ನಷ್ಟು ಆಳವಾಗಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಮೃತ ಯುವತಿಯರ ಸಂಬಂಧಿಯಾದ ಬಿಸ್ವಾಂಬರ್​ ಮಜ್ಹಿ ಪ್ರತಿಕ್ರಿಯೆ ನೀಡಿ, ಹುಡುಗಿಯರು ಕಾಣೆಯಾಗಿದ್ದಾರೆ ಎಂಬ ಬಗ್ಗೆ ನಿನ್ನೆ ಸಂಜೆ ಹೊತ್ತಿಗೆ ಗೊತ್ತಾಯಿತು. ನಾವು ಅವರಿಗಾಗಿ ಹುಡುಕಲು ಶುರು ಮಾಡಿದೆವು. ಗ್ರಾಮದ ಮೂಲೆಮೂಲೆಯಲ್ಲಿ ಹುಡುಕಿದರೂ ಅವರ ಸುಳಿವು ಸಿಗಲಿಲ್ಲ. ಬಳಿಕ ಅವರು ಕಾಡಿಗೆ ಹೋಗಿದ್ದನ್ನು ನೋಡಿದವರು ಯಾರೋ ಹೇಳಿದರು. ಕೂಡಲೇ ಅಲ್ಲಿಗೆ ಹೋಗಿ ಹುಡುಕಲು ಶುರು ಮಾಡಿದೆವು. ಆಗ ಅವರ ಶವ ಮರದ ಮೇಲೆ ನೇತಾಡುತ್ತಿದ್ದುದು ಕಂಡುಬಂತು ಎಂದು ತಿಳಿಸಿದ್ದಾರೆ.

Gayathri SG

Recent Posts

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

16 mins ago

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

42 mins ago

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ಪ್ರಧಾನಿ ಮೋದಿ ಸಂತಾಪ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್‌ ಅಧ್ಯಕ್ಷ…

50 mins ago

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

1 hour ago

ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಸಕ್ಸಸ್

ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…

1 hour ago

ಮತಗಟ್ಟೆ ದ್ವಂಸ ಪ್ರಕರಣ : ಬಿಡುಗಡೆಗೊಂಡ ಗ್ರಾಮಸ್ಥರಿಗೆ ಎನ್. ಮಹೇಶ್ ಸಾಂತ್ವಾನ

ಏಪ್ರಿಲ್ 26 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ…

1 hour ago