ದೇಶ

ʼತಪ್ಪು ಆದರ್ಶಕ್ಕೆ ಪತ್ನಿಯನ್ನು ದೂರ ಇಟ್ಟೆʼ ಎಂದು ಪರಿತಪಿಸಿದ ಇನ್ಫೋಸಿಸ್ ಮೂರ್ತಿ

ದೆಹಲಿ: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಇದೀಗ ತಮ್ಮ ಪತ್ನಿ ಸುಧಾ ಮೂರ್ತಿ ಬಗ್ಗೆ ಕುತೂಹಲಕಾರಿ ವಿಚಾರ ಹಂಚಿಕೊಂಡಿದ್ದಾರೆ.  ಸಂದರ್ಶನದಲ್ಲಿ ಮಾತನಾಡುತ್ತಿದ್ದ ನಾರಾಯಣಮೂರ್ತಿ, ತನ್ನ ತಪ್ಪು ಆದರ್ಶದಿಂದಾಗಿ ಪತ್ನಿಯನ್ನು ಇನ್ಫೋಸಿಸ್​ಗೆ ಸೇರದಂತೆ ದೂರ ಇಟ್ಟುಬಿಟ್ಟೆ ಎಂದು ವಿಶ್ವದ ಎರಡು ಅತಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಕೆಲ ಫಿಲಾಸಫಿ ಪ್ರೊಫೆಸರುಗಳೊಂದಿಗೆ ನಾರಾಯಣಮೂರ್ತಿ ಮಾತನಾಡುವಾಗ ಹೇಳಿದ್ದಾರೆ.

ನಾರಾಯಣಮೂರ್ತಿ, ನಂದನ್ ನಿಲೇಕಣಿ ಮತ್ತಿತರ ಕೆಲ ಜನರು ಸೇರಿ 1981ರಲ್ಲಿ ಇನ್ಫೋಸಿಸ್ ಸಂಸ್ಥೆಯನ್ನು ಸ್ಥಾಪಿಸಿದ್ದರು. ಆಗಿನ ಕಾಲಕ್ಕೆ ಕಂಪನಿ ಸ್ಥಾಪಿಸಲು ಸುಧಾ ಮೂರ್ತಿ ಅವರೇ 10,000 ರೂ ಸಾಲವಾಗಿ ನೀಡಿದ್ದರು. ಸುಧಾ ಮೂರ್ತಿ ಗೃಹಿಣಿ ಮಾತ್ರವೇ ಆಗಿರಲಿಲ್ಲ. ಎಂಜಿನಿಯರಿಂಗ್​ನ ಎಲ್ಲಾ ಸಬ್ಜೆಕ್ಟ್​ನಲ್ಲೂ ಮೊದಲ ರ್ಯಾಂಕ್ ಪಡೆದು, ಇನ್ಸ್​ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಂಸ್ಥೆಯಿಂದ ಚಿನ್ನದ ಪದಕ ಗಿಟ್ಟಿಸಿದ್ದವರು. ಇನ್ಫೋಸಿಸ್​ನಲ್ಲಿ ಕೆಲಸ ಮಾಡುವ ಎಲ್ಲಾ ಅರ್ಹತೆ ಇವರಿಗಿತ್ತು.

ಇನ್ಫೋಸಿಸ್​ನ ಸಹ-ಸಂಸ್ಥಾಪಕರಿಗಿಂತ ಸುಧಾ ಮೂರ್ತಿ ಹೆಚ್ಚು ಅರ್ಹತೆ ಹೊಂದಿದ್ದರು. ಇದು ನಾರಾಯಣಮೂರ್ತಿಗೂ ಅರಿವಿತ್ತಂತೆ. ಆದರೆ, ಯಾವುದೋ ಆದರ್ಶವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪತ್ನಿಯನ್ನು ಇನ್ಫೋಸಿಸ್​ನತ್ತ ಸುಳಿಯಲು ಬಿಡಲಿಲ್ಲ. ಈಗ ತಾನು ತಪ್ಪು ಮಾಡಿದೆ ಎಂದು ಮೂರ್ತಿ ಪರಿತಪಿಸಿದ್ದಾರೆ.

‘ಒಳ್ಳೆಯ ಕಾರ್ಪೊರೇಟ್ ಆಡಳಿದಲ್ಲಿ ಕುಟುಂಬದ ಸದಸ್ಯರು ಬರಬಾರದು ಎಂಬುದು ಆಗ ನನಗೆ ಇದ್ದ ಭಾವನೆ. ಯಾಕೆಂದರೆ ಆ ದಿನಗಳಲ್ಲಿ ಕುಟುಂಬ ಆಡಳಿತದ ಕಂಪನಿಗಳೇ ಹೆಚ್ಚಾಗಿದ್ದವು. ಮಕ್ಕಳು ಮರಿಗಳೆಲ್ಲಾ ಬಂದು ಕಂಪನಿ ನಡೆಸುತ್ತಿದ್ದರು. ಕಾರ್ಪೊರೇಟ್ ಕಾನೂನು, ಶಿಸ್ತುಗಳನ್ನು ಗಾಳಿಗೆ ತೂರುತ್ತಿದ್ದರು,’ ಎಂದು ನಾರಾಯಣಮೂರ್ತಿ ತನ್ನ ಕುಟುಂಬ ಸದಸ್ಯರನ್ನು ಇನ್ಫೋಸಿಸ್​ಗೆ ಸೇರಿಸಿಕೊಳ್ಳದಿರಲು ತನಗೆ ಇದ್ದ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಆದರೆ, ತನ್ನದು ತಪ್ಪು ಆದರ್ಶವಾಗಿತ್ತು ಎಂಬುದು ಇತ್ತೀಚೆಗೆ ಅರಿವಾಯಿತು ಎಂದೂ ಹೇಳಿದ್ದಾರೆ.

 

Ashitha S

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

5 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

6 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

6 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

6 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

7 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

7 hours ago