ದೇಶ

ಈ ಬಾರಿ ನೀಲಿ ಬಣ್ಣದ ತುಸ್ಸಾರ್ ರೇಷ್ಮೆ ಸೀರೆ ತೊಟ್ಟ ನಿರ್ಮಲಾ ಸೀತಾರಾಮನ್: ಏನಿದರ ವಿಶೇಷ ?

ದೆಹಲಿ: ನಿರ್ಮಲಾ ಸೀತಾರಾಮನ್ ಫೆ. 1ರಂದು ತಮ್ಮ ಸತತ ಆರನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಾರಿ ಅವರು ಪೂರ್ವಭಾರತದ ಭಾಗದಲ್ಲಿ ಸಿಗುವ ನೀಲಿ ಬಣ್ಣದ ತುಸ್ಸಾರ್ ಸೀರೆ ತೊಟ್ಟಿದ್ದಾರೆ. 2023ರ ಬಜೆಟ್​ನಲ್ಲಿ ಅವರು ಕರ್ನಾಟಕ ಕೆಂಪು ಬಣ್ಣದ ಇಳಕಲ್ ಸೀರೆ ಉಟ್ಟಿದ್ದರು.  ಈ ಬಾರಿಯ ಮಧ್ಯಂತರ ಬಜೆಟ್​ನಲ್ಲಿ ಅವರು ನೀಲಿ ಮತ್ತು ಕ್ರೀಮ್ ಬಣ್ಣದ ಛಾಯೆ ಇರುವ ಸೀರೆ ತೊಟ್ಟಿದ್ದಾರೆ.

ನಿರ್ಮಲಾ ಸೀತಾರಾಮನ್ ಈ ಬಾರಿ ತೊಟ್ಟಿರುವ ನೀಲಿ ಬಣ್ಣದ ಸೀರೆ ತುಸ್ಸಾರ್ ರೇಷ್ಮೆಯದ್ದು. ಪಶ್ಚಿಮ ಬಂಗಾಳ, ಬಿಹಾರ, ಝಾರ್ಖಂಡ್, ಒಡಿಶಾ ಪ್ರದೇಶಗಳಲ್ಲಿ ಸಿಗುವ ರೇಷ್ಮೆಯಿಂದ ಈ ಸೀರೆ ನೇಯಲಾಗುತ್ತದೆ.

2022ರ ಬಜೆಟ್​ನಲ್ಲಿ ಕೆಂಪು ಮತ್ತು ಕಂದು ಮಿಶ್ರಿತ ಬಣ್ಣದ ಸೀರೆ ತಟ್ಟಿದ್ದರು. ಅದು ಬೊಮಕಾಯ್ ರೇಷ್ಮೆ ಸೀರೆ ತೊಟ್ಟಿದ್ದರು, 2021ರಲ್ಲಿ ಅವರು ಕೆಂಪು ಮತ್ತು ಬಿಳಿ ಮಿಶ್ರಿತ ಸೀರೆ  2020ರಲ್ಲಿ ಅವರು ಹಳದಿ ಬಣ್ಣ ಸೀರೆ ತೊಟ್ಟಿದ್ದರೆ 2019ರಲ್ಲಿ ಗುಲಾಬಿ ಬಣ್ಣದ ಮಂಗಳಗಿರಿ ಸೀರೆ ಹಾಗೂ ಈ ಬಾರಿ  ನೀಲಿ ಬಣ್ಣದ ತುಸ್ಸಾರ್ ರೇಷ್ಮೆ ಸೀರೆ ಉಟ್ಟಿದ್ದಾರೆ.

ಜಾರ್ಖಂಡ್‌ನ ಮಹಿಳೆಯರ ಸಾಂಪ್ರದಾಯಕ ಉಡುಗೆ ಪಂಚಿ ಮತ್ತು ಪರಹನ್. ಇದನ್ನು ಹೆಚ್ಚಾಗಿ ಬುಡಕಟ್ಟು ಜನಾಂಗದ ಮಹಿಳೆಯರು ವಿಶಿಷ್ಟ ರೀತಿಯಲ್ಲಿ ಧರಿಸುತ್ತಾರೆ. ಪಂಚಿ ಸೊಂಟದ ಸುತ್ತ ಸುತ್ತುವ ಉಡು ವಸ್ತ್ರವಾಗಿದ್ದರೆ, ಪರಹನ್ ಅದರ ಮೇಲೆ ಧರಿಸುವ ತೊಡುಗೆಯಾಗಿದೆ. “ತಸರ್ ಅಥವಾ ತುಸ್ಸಾರ್ ರೇಷ್ಮೆ ಸೀರೆಗಳು ಜಾರ್ಖಂಡ್ ಮಹಿಳೆಯರ ವಿಶೇಷ ಸೀರೆಯ ವಿಧವಾಗಿವೆ. ಭಾರತದ ಅತ್ಯುತ್ತಮ ಸಾಂಪ್ರದಾಯಕ ಸೀರೆಗಳ ವಿನ್ಯಾಸದಲ್ಲಿ ತುಸ್ಸಾರ್ ಸಿಲ್ಕ್ ಸೀರೆಗಳು ಬಹು ಮಹತ್ವ” ಪಡೆದಿವೆ. ಭಾರತದ ವಿವಿಧ ಭಾಗಗಳಲ್ಲಿ ಮಾತ್ರವಲ್ಲದೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಇಂದು ಈ ಸೀರೆ ಬೇಡಿಕೆ ಹೊಂದಿದೆ.

ತುಸ್ಸಾರ್ ರೇಷ್ಮೆ ಸೀರೆಯ ನೇಯ್ಗೆ ಸಾಂಪ್ರದಾಯಿಕವಾಗಿ ಆರಂಭವಾದದ್ದು ಸರಿಸುಮಾರು ಮಧ್ಯಕಾಲೀನ ಯುಗದ ಸಮಯದಲ್ಲಿ. ಇದನ್ನು ವಿಶೇಷವಾದ ರೇಷ್ಮೆ ಹುಳ (ಅಂಧೇರಿ ಯಾ ಪಪಿಯಾ) ದಿಂದ ತಯಾರಿಸಲಾಗುತ್ತಿತ್ತು. ಇದಕ್ಕೆ “ಕಚ್ಚಾ ರೇಷ್ಮೆ’ ಎಂದು ಕರೆಯಲಾಗುತ್ತದೆ. ಸಂಸ್ಕೃತದಲ್ಲಿ “ಕೋಸಾ’ ರೇಶೆ ಎಂದು ಕರೆಯುವ ಈ ಸೀರೆಯ ಬಂಗಾರದ ಬಣ್ಣ ಹಾಗೂ ವಿಶೇಷ ವಿನ್ಯಾಸವು ಈ ಸೀರೆಯನ್ನು ಜನಪ್ರಿಯವಾಗಿಸಿದೆ. ಈ ಸೀರೆಯನ್ನು ಜಾನಪದೀಯರು ಹಾಗೂ ಬುಡಕಟ್ಟು ಜನಾಂಗದವರು ನೇಯ್ದು ಪ್ರಸ್ತುತಪಡಿಸುತ್ತಿದ್ದರು. ಆರಂಭದಲ್ಲಿ ಕೈಮಗ್ಗದಲ್ಲೇ ತಯಾರಾಗುತ್ತಿದ್ದ ಈ ಸೀರೆಗಳು ಇಂದು ಅಧಿಕ ಬೇಡಿಕೆಯಿಂದಾಗಿ ಯಾಂತ್ರೀಕೃತ ಮಗ್ಗಗಳಿಂದಲೂ ತಯಾರಾಗುತ್ತಿವೆ.

ಕಳೆದ ವರ್ಷ ನಿರ್ಮಲಾ ಸೀತಾರಾಮನ್ ತೊಟ್ಟಿದ್ದ ಇಳಕಲ್ ಸೀರೆ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಸಿದ್ಧವಾಗಿರುವ ಸೀರೆ. ಕೆಂಪು ಬಣ್ಣದ ಇಳಕಲ್ ಸೀರೆಯಲ್ಲಿ ಸಾಕಷ್ಟು ಕಸೂತಿ ಕಲೆ ಮೇಳೈಸಿತ್ತು. ಪ್ರಹ್ಲಾದ್ ಜೋಷಿ ಈ ಸೀರೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಅದನ್ನೇ ಬಜೆಟ್ ಮಂಡನೆ ದಿನ ಹಣಕಾಸು ಸಚಿವರು ತೊಟ್ಟು ಹೋಗಿದ್ದರು.

ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿಹೋಗಿರುವ ಅವರು ರಾಜ್ಯದ ಸೀರೆ ತೊಟ್ಟು ಅಭಿಮಾನ ತೋರ್ಪಡಿಸಿದ್ದರು. ಧಾರವಾಡದ ಆರತಿ ಕ್ರಾಫ್ಟ್ಸ್ ಎಂಬ ಸಂಸ್ಥೆ ಈ ಸೀರೆ ಮತ್ತು ಕಸೂತಿಯನ್ನು ಸಿದ್ಧಪಡಿಸಿತ್ತು.

ಇವತ್ತು ಫೆ. 1ರಂದು ನಿರ್ಮಲಾ ಸೀತಾರಾಮನ್ ತಮ್ಮ ಆರನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇದು ಅವರಿಗೆ ಚೊಚ್ಚಲ ಮಧ್ಯಂತರ ಬಜೆಟ್. ಸತತ ಆರು ಬಜೆಟ್ ಮಂಡನೆ ಮೂಲಕ ಅವರು ಮೊರಾರ್ಜಿ ದೇಸಾಯಿ ದಾಖಲೆ ಸರಿಗಟ್ಟಲಿದ್ದಾರೆ.

Ashitha S

Recent Posts

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್​​ ಫೈರ್; ಯುವಕ ಸಾವು

ಶಿಕಾರಿಗೆ ತೆರಳಿದ್ದ ಯುವಕನ ಮೇಲೆ ಮಿಸ್ ಫೈರ್ ಆದ ಘಟನೆ ಚಿಕ್ಕಮಗಳೂರಿನ ತಾಲೂಕಿನ ಉಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ…

48 seconds ago

ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ

ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ…

16 mins ago

ನಂಜನಗೂಡು ಶ್ರೀ ನಂಜುಂಡೇಶ್ವರನ ದರ್ಶನ ಪಡೆದ ಹೆಚ್. ಡಿ ರೇವಣ್ಣ

ಮಹಿಳೆ ಕಿಡ್ನಾಪ್ ಕೇಸ್ ನಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಾಜಿ ಸಚಿವ ಹೆಚ್.…

33 mins ago

ʼನನ್ನನ್ನು ನೋಡಬೇಡಿ, ಅಟಲ್‌ ಸೇತುವೆ ನೋಡಿʼ ಎಂದ ರಶ್ಮಿಕಾಗೆ ಪಿಎಂ ಮೋದಿ ಮೆಚ್ಚುಗೆ

ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…

1 hour ago

ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ

ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…

1 hour ago

ಇಂದು ರೀ ರಿಲೀಸ್ ಆದ ಉಪ್ಪಿಯ ‘‘A’’ ಸಿನಿಮಾ; ಸ್ವಾಗತಿಸಿದ ಫ್ಯಾನ್ಸ್

ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್​ ಆಗಿದೆ. ಬೆಂಗಳೂರಿನ…

2 hours ago