News Karnataka Kannada
Saturday, April 13 2024
Cricket
ದೇಶ

ಬೈಡನ್ ದಂಪತಿಗೆ ಶ್ರೀಗಂಧದ ಪೆಟ್ಟಿಗೆಯೊಂದಿಗೆ 10 ಉಡುಗೊರೆ ನೀಡಿದ ಪ್ರಧಾನಿ ಮೋದಿ

PM Modi Gift To Biden
Photo Credit : Twitter

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸದಲ್ಲಿದ್ದಾರೆ. ಅವರು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ 10 ವಸ್ತುಗಳನ್ನು ಬೈಡನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಜಿಲೆ ಬೈಡನ್​ಗೆ ಮೋದಿ ಅವರು 7.5 ಕ್ಯಾರೆಟ್ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದರು. ಈ ವಜ್ರವು ರಾಸಾಯನಿಕ ಹಾಗೂ ಆಪ್ಟಿಕಲ್ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ.

ಬೈಡನ್ ದಂಪತಿಗೆ ಮೈಸೂರಿನಿಂದ ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ಶ್ರೀಗಂಧದ ಪೆಟ್ಟಿಗೆ, ಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿಯಿಂದ ತಯಾರಿಸಲ್ಪಟ್ಟ ಗಣೇಶನ ವಿಗ್ರಹ, ದೀಪ, ಪಶ್ಚಿಮ ಬಂಗಾಳದ ಕುಶಲಕರ್ಮಿ ತಯಾರಿಸಿದ ಬೆಳ್ಳಿಯ ತೆಂಗಿನಕಾಯಿ, ಭೂದಾನಕ್ಕಾಗಿ ಭೂಮಿಯ ಬದಲು ಶ್ರೀಗಂಧದ ತುಂಡು,ತಮಿಳುನಾಡಿನಿಂದ ತಂದಿರುವ ಬಿಳಿ ಎಳ್ಳು, ರಾಜಸ್ಥಾನದಲ್ಲಿ ಸಿದ್ಧಪಡಿಸಲಾದ 24ಕೆ ಶುದ್ಧ ಹಾಗೂ ಹಾಲ್ಮಾರ್ಕ್​ ಇರುವ ಚಿನ್ನದ ನಾಣ್ಯ, ಲವಣದಾನವಾಗಿ ಗುಜರಾತ್‌ನಿಂದ ತಂದ ಉಪ್ಪನ್ನು ಸಮರ್ಪಿಸಿದ್ದಾರೆ. ತುಪ್ಪ ಮತ್ತು ಬೆಣ್ಣೆಯನ್ನು ಒಳಗೊಂಡ ಪೆಟ್ಟಿಗೆ. ಅಲ್ಲದೇ ಜಾರ್ಖಂಡ್‌ನಲ್ಲಿ ಕೈಯಿಂದ ತಯಾರಿಸಿದ ರೇಷ್ಮೆ ಬಟ್ಟೆ, ಉತ್ತರಾಖಂಡದ ಉದ್ದ ಅಕ್ಕಿ ಮತ್ತು ಮಹಾರಾಷ್ಟ್ರದ ಬೆಲ್ಲವನ್ನು ಒಳಗೊಂಡಿದೆ. ಹಾಗೂ ‘ದಿ ಟೆನ್ ಪ್ರಿನ್ಸಿಪಾಲ್ ಉಪನಿಷದ್’ನ ಪ್ರತಿಯನ್ನು ಪ್ರಧಾನಿ ಮೋದಿಯವರು ಜೋ ಬೈಡನ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು