News Karnataka Kannada
Saturday, April 13 2024
Cricket
ದೇಶ

ಸಂತ ರವಿದಾಸ್ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

Modi
Photo Credit : News Kannada

ವಾರಣಾಸಿ: ಪ್ರಧಾನಿ ಮೋದಿ ಅವರು ಇಂದು (ಫೆ.23)ವಾರಣಾಸಿಯಲ್ಲಿ ಸಂತ ರವಿದಾಸ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಸಂತ ಗುರು ರವಿದಾಸ್ ಜನ್ಮಸ್ಥಳಕ್ಕೂ ಭೇಟಿ ನೀಡಿದರು. ಮೋದಿ ಜತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಜೊತೆಗಿದ್ದರು.

ಪ್ರತಿಮೆ ಅನಾವರಣಗೊಳಿಸಿದ ನಂತರ ಮೋದಿ ಮತ್ತು ಯುಪಿ ಸಿಎಂ ಸಂತ ಗುರು ರವಿದಾಸ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಸಂತ ಗುರು ರವಿದಾಸ್ ಅವರ 647ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ರವಿದಾಸ್ ಜಿ ನನ್ನನ್ನು ಮತ್ತೆ ಮತ್ತೆ ಅವರ ಜನ್ಮಭೂಮಿಗೆ ಕರೆಯುತ್ತಾರೆ. ಅವರ ಸಂಕಲ್ಪಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಅವಕಾಶ ಮತ್ತು ಅವರ ಲಕ್ಷಾಂತರ ಅನುಯಾಯಿಗಳ ಸೇವೆ ಮಾಡುವ ಅವಕಾಶವನ್ನು ನಾನು ಸ್ವೀಕರಿಸುತ್ತೇನೆ. ಗುರುಗಳ ಜನ್ಮತೀರ್ಥದಲ್ಲಿ, ಅವರ ಎಲ್ಲಾ ಅನುಯಾಯಿಗಳಿಗೆ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಪಾಲಿಗೆ ಭಾಗ್ಯವಿದು. ವಾರಣಾಸಿಯ ಸಂಸದನಾಗಿ, ವಾರಣಾಸಿಯ ಸಾರ್ವಜನಿಕ ಪ್ರತಿನಿಧಿಯಾಗಿ, ನಿಮ್ಮೆಲ್ಲರನ್ನು ವಾರಣಾಸಿಗೆ ಸ್ವಾಗತಿಸುವುದು ಮತ್ತು ನಿಮ್ಮ ಸೌಲಭ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ನನ್ನ ವಿಶೇಷ ಜವಾಬ್ದಾರಿ. ಇದು ನನ್ನ ಕರ್ತವ್ಯ, ಈ ಪವಿತ್ರ ದಿನದಂದು ನನ್ನ ಕರ್ತವ್ಯವನ್ನು ಪೂರೈಸುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು