News Karnataka Kannada
Thursday, April 25 2024
Cricket
ದೇಶ

ಯುಪಿ ಡಬಲ್ ಎಂಜಿನ್ ಸರ್ಕಾರವನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

Up
Photo Credit : News Kannada

ಲಕ್ನೋ: ಪ್ರಧಾನಿ ಮೋದಿ ಇಂದು(ಫೆ.19) ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಹಾಡಿ ಹೊಗಳಿದ್ದು, ರಾಜ್ಯದಲ್ಲಿ ಹೂಡಿಕೆ ಸಂಸ್ಕೃತಿಯನ್ನು “ರೆಡ್ ಟೇಪ್” ನಿಂದ ರೆಡ್ ಕಾರ್ಪೆಟ್‌ಗೆ “ಡಬಲ್ ಎಂಜಿನ್ ಸರ್ಕಾರ” ಬದಲಾಯಿಸಿದೆ ಎಂದು ಹೇಳಿದರು.

“ಯುಪಿಯಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾಗಿ ಏಳು ವರ್ಷಗಳು ಕಳೆದಿವೆ. ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ರೆಡ್ ಟೇಪ್ ಸಂಸ್ಕೃತಿಯನ್ನು ಕೊನೆಗೊಳಿಸಲಾಗಿದೆ, ರೆಡ್ ಕಾರ್ಪೆಟ್ ಸಂಸ್ಕೃತಿಯನ್ನು ಇಲ್ಲಿಗೆ ತರಲಾಗಿದೆ” ಎಂದು ಲಕ್ನೋದಲ್ಲಿ ನಡೆದ ಹೂಡಿಕೆ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ ಹೇಳಿದ್ದಾರೆ.

ಕಳೆದ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಅಪರಾಧ ಕಡಿಮೆಯಾಗಿದೆ ಮತ್ತು ವ್ಯಾಪಾರ ಸಂಸ್ಕೃತಿ ವಿಸ್ತರಿಸಿದೆ. “ಕಳೆದ ಏಳು ವರ್ಷಗಳಲ್ಲಿ, ಯುಪಿಯಲ್ಲಿ ವ್ಯಾಪಾರ, ಅಭಿವೃದ್ಧಿ ಮತ್ತು ನಂಬಿಕೆಯ ವಾತಾವರಣವು ರೂಪುಗೊಂಡಿದೆ. ಬದಲಾವಣೆಯ ನಿಜವಾದ ಉದ್ದೇಶವಿದ್ದರೆ ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಡಬಲ್ ಇಂಜಿನ್ ಸರ್ಕಾರ ತೋರಿಸಿದೆ ಎಂದಿದ್ದಾರೆ ಮೋದಿ.

ಅಂದು ಯುಪಿಯಲ್ಲಿ  ಹೂಡಿಕೆ ಮತ್ತು ಉದ್ಯೋಗದ ಬಗ್ಗೆ ಅಲ್ಲ ಅಪರಾಧ, ಗಲಭೆ, ಸರಗಳ್ಳತನದ ಸುದ್ದಿಗಳು ಬರುತ್ತಿದ್ದವು. ಆ ಕಾಲದಲ್ಲಿ ಯುಪಿ ಅಭಿವೃದ್ಧಿಯಾಗಲಿದೆ ಎಂದು ಯಾರಾದರೂ ಹೇಳಿದರೆ ಬಹುಶಃ ಯಾರೂ ಅದನ್ನು ಕೇಳಲು ಸಿದ್ಧರಿರಲಿಲ್ಲ. ಇಂದು ಉತ್ತರ ಪ್ರದೇಶಕ್ಕೆ ಲಕ್ಷ ಕೋಟಿ ಬಂಡವಾಳ ಬರುತ್ತಿದೆ. ‘ವಿಕಸಿತ್ ಉತ್ತರ ಪ್ರದೇಶ’ದ ಹಿಂದಿನ ಶಕ್ತಿಯಾಗಿರುವ ಎಂಎಸ್‌ಎಂಇಗಳ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು