ಇಂಫಾಲ್: ಸಂಘರ್ಷ ಪೀಡಿತ ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಅಸ್ಸಾಂ ರೈಫಲ್ಸ್ ನಡೆಸಿದ ಕಾರ್ಯಾಚರಣೆಯ ನಂತರ, ತೆಂಗ್ನೌಪಾಲ್ ಜಿಲ್ಲೆಯಲ್ಲಿ 13 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಮೃತರ ಗುರುತು ತಿಳಿದುಬಂದಿಲ್ಲ. ಮಣಿಪುರ ಸರ್ಕಾರವು ಭಾನುವಾರ ಡಿಸೆಂಬರ್ 18 ರವರೆಗೆ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಿದೆ.
ಚಂಡೇಲ್ ಮತ್ತು ಕಾಕ್ಚಿಂಗ್, ಚುರಚಂದ್ಪುರ ಮತ್ತು ಬಿಷ್ಣುಪುರ್, ಚುರಾಚಂದ್ಪುರ ಮತ್ತು ಕಾಕ್ಚಿಂಗ್, ಕಾಂಗ್ಪೊಕ್ಪಿ ಮತ್ತು ಇಂಫಾಲ್ ಪಶ್ಚಿಮ, ಕಾಂಗ್ಪೊಕ್ಪಿ ಮತ್ತು ಇಂಫಾಲ್ ಪೂರ್ವ, ಕಾಂಗ್ಪೊಕ್ಪಿ ಮತ್ತು ತೌಬಲ್ ಮತ್ತು ತೆಂಗ್ನೌಪಾಲ್ ಮತ್ತು ಕಾಕ್ಚಿಂಗ್ನಂತಹ ಜಿಲ್ಲೆಗಳ ನಡುವಿನ ಪಕ್ಕದ ಪ್ರದೇಶಗಳಲ್ಲಿ 2 ಕಿಮೀ ವ್ಯಾಪ್ತಿಯಲ್ಲಿ ಸೇವೆಗಳನ್ನು ಒದಗಿಸುವ ಮೊಬೈಲ್ ಟವರ್ ಗಳು ಕಾರ್ಯಾಚರಣೆ ಆರಂಭಿಸಿಲ್ಲ.