News Karnataka Kannada
Thursday, May 02 2024
ಮಹಾರಾಷ್ಟ್ರ

ಮುಂಬೈ: ಚಾರ್ಕೋಪ್ ಕನ್ನಡಿಗರ ಬಳಗದ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಅವರಿಗೆ ಮಾತೃವಿಯೋಗ

Charkop Kannadigas Balaga vice-president Chandrasekhar Shetty passes away
Photo Credit : By Author

ಮುಂಬೈ(ಆರ್‌ಬಿಐ): ಉಪನಗರ ಕಾಂದಿವಿಲಿ ಪಶ್ಚಿಮದಲ್ಲಿನ ಚಾರ್‌ಕೋಪ್ ಕನ್ನಡಿಗರ ಬಳಗದ ಉಪಾಧ್ಯಕ್ಷ, ಹಾಗೂ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಸಕ್ರಿಯ ಕಾರ್ಯಕರ್ತ ಚಂದ್ರಶೇಖರ ಎಸ್.ಶೆಟ್ಟಿ ಅವರ ಮಾತೃಶೀ ಸುಶೀಲಾ ಶುಭಕರ ಶೆಟ್ಟಿ (೮೬.) ಅಲ್ಪಕಾಲದ ಅಸೌಖ್ಯದಿಂದ ಮಧ್ಯಾಹ್ನ ಉಡುಪಿ ಕೆಮ್ತೂರು ಅಲ್ಲಿನ ಸ್ವಗೃಹ ಶುಭ ನಿಲಯದಲ್ಲಿ ನಿಧನ ಹೊಂದಿದರು.

ಮೃತರು ಚಂದ್ರಶೇಖರ ಶೆಟ್ಟಿ ಸಹಿತ ಮೂವರು ಪುತ್ರರು, ಓರ್ವ ಸುಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿರುತ್ತಾರೆ.

ಸುಶೀಲಾ ಅವರ ಅಗಲುವಿಕೆಗೆ ಚಾರ್‌ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ.ಕೃಷ್ಣ ಶೆಟ್ಟಿ, ಕಾರ್ಯದರ್ಶಿ ರಘುನಾಥ ಎನ್.ಶೆಟ್ಟಿ ಹಾಗೂ ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ನಿಟ್ಟೆ ಎಂ.ಜಿ ಶೆಟ್ಟಿ ಮತ್ತು ಉಭಯ ಸಂಸ್ಥೆಗಳ ಪಧಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು ವಿಶ್ವಸ್ಥರು ಸಂತಾಪ ಸೂಚಿಸಿದ್ದಾರೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು