ಮಹಾರಾಷ್ಟ್ರ: ಸಚಿವ ಸಂಪುಟ ವಿಸ್ತರಣೆ, ಪ್ರಮಾಣ ವಚನ ಸ್ವೀಕರಿಸಿದ 18 ಸಚಿವರು

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ನೂತನ ಸಚಿವ ಸಂಪುಟ ರಚನೆಯಾಗಿದ್ದು, 18 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರದಲ್ಲಿ ನಾಟಕೀಯ ಬೆಳವಣಿಗೆಗಳ ನಡುವೆ ಏಕನಾಥ್ ಶಿಂಧೆ ಬಣ ಮತ್ತು ಬಿಜೆಪಿ ಒಟ್ಟಾಗಿ ಸರ್ಕಾರ ರಚಿಸಿ, ಶಿಂಧೆ ಮಹಾ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು.

ಅದಾದ ಬಳಿಕ ಇಂದು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಒಟ್ಟು 18 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಶಿಂಧೆ ವರ್ಗದ ಒಂಬತ್ತು ಜನರು, ಬಿಜೆಪಿಯಿಂದ ಒಂಬತ್ತು ಮಂದಿ ಸಮನಾಗಿ ಸಚಿವರಾಗಿದ್ದಾರೆ. ಇಂದು ರಾಜಭವನದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ 18 ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಶಿಂಧೆ ಹಾಗೂ ಬಿಜೆಪಿ ನಾಯಕತ್ವದ ನಡುವೆ ಹಲವು ಸುತ್ತಿನ ಚರ್ಚೆಗಳು ನಡೆದಿದ್ದವು. ಸುದೀರ್ಘ ಚರ್ಚೆ ಬಳಿಕ ಶಿಂಧೆ ಬಣದ ಶಾಸಕರು ಹಾಗೂ ಬಿಜೆಪಿ ಶಾಸಕರಿಗೆ ಸಚಿವ ಸಂಪುಟದಲ್ಲಿ ಯಾವುದೇ ಟೀಕೆಗಳಿಲ್ಲದೆ ಸಮತೋಲಿತವಾಗಿ ಸ್ಥಾನ ಕಲ್ಪಿಸಲಾಗಿದೆ.

ಬಿಜೆಪಿಯಿಂದ ಚಂದ್ರಕಾಂತ್‌ ಪಾಟೀಲ್‌, ಸುಧೀರ್‌ ಮುಗಂಟಿವಾರ್‌, ಗಿರೀಶ್‌ ಮಹಾಜನ್‌, ಸುರೇಶ್‌ ಖಂಡೆ, ರಾಧಕೃಷ್ಣ ವಿಕಿ ಪಾಟೀಲ್‌, ರವೀಂದ್ರ ಚೌಹ್ಹಾನ್‌, ಮಂಗಲ್‌ ಪ್ರಭಾತ್‌ ಲೋಧಾ, ವಿಜಯ ಕುಮಾರ್‌ ಗಾವಿತ್‌ ಮತ್ತು ಅತುಲ್‌ ಸಾವೆ ಪ್ರಮಾಣ ವಚನ ಸ್ವೀಕರಿಸಿದರು.

ಶಿವಸೇನೆಯಿಂದ ದಾದಾ ಭೂಸೆ, ಶಂಬುರಾಜೆ ದೇಸಾಯಿ, ಸಂದೀಪನ್‌ ಭೂಮ್ರೆ, ಉದಯ್‌ ಸಾಮಂತ್‌, ತಾನಾಜಿ ಸಾವಂತ್‌, ಅಬ್ದುಲ್‌ ಸತ್ತಾರ್‌, ದೀಪಕ್‌ ಕೇಸರ್ಕರ್‌, ಗುಲಬ್‌ರಾವ್‌ ಪಾಟೀಲ್‌, ಸಂಜಯ್‌ ರಾಥೋಡ್‌ಗೆ ಸಚಿನ ಸ್ಥಾನ ದೊರೆತಿದೆ.

Sneha Gowda

Recent Posts

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

1 min ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

9 mins ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

11 mins ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

32 mins ago

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

46 mins ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

1 hour ago