News Karnataka Kannada
Tuesday, April 30 2024
ಮಹಾರಾಷ್ಟ್ರ

ಶ್ರೀರಾಮ ಭೇಟೆಯಾಡಿ ಪ್ರಾಣಿಗಳನ್ನು ತಿನ್ನುತ್ತಿದ್ದ: ಜಿತೇಂದ್ರ ವಿವಾದಾತ್ಮಕ ಹೇಳಿಕೆ

New Project 2024 01 04t102427.150
Photo Credit : News Kannada

ಮಹಾರಾಷ್ಟ್ರ: ಶ್ರೀರಾಮ ಸಸ್ಯಹಾರಿಯಲ್ಲ, ಮಾಂಸಾಹಾರಿ ಎಂದು ಎನ್​ಸಿಪಿ ಶರದ್ ಪವಾರ್ ಬಣದ ಶಾಸಕ ಮತ್ತು ಮಾಜಿ ಸಚಿವ ಜಿತೇಂದ್ರ ಆವ್ಹಾದ್​ ಹೇಳಿದ್ದಾರೆ. ಇದೀಗ ಇವರ ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ. ಇದಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿತೇಂದ್ರ ಅವರ ಈ ಹೇಳಿಕೆಗೆ ಅಜಿತ್ ಪವಾರ್ ಬಣದ ಎನ್‌ಸಿಪಿ ಮುಂಬೈನಲ್ಲಿ ಪ್ರತಿಭಟನೆ ನಡೆಸಿದೆ.

ಜಿತೇಂದ್ರ ಆವ್ಹಾದ್​ ರಾಮ ನಮ್ಮವನು, ಬಹುಜನರಿಗೆ ಸೇರಿದವನು. ರಾಮ ಭೇಟೆಯಾಡಿ ಪ್ರಾಣಿಗಳನ್ನು ತಿನ್ನುತ್ತಿದ್ದ ಎಂದು ಹೇಳಿಕೆ ನೀಡಿ, ವಿವಾದವನ್ನು ಹುಟ್ಟುಹಾಕಿದ್ದಾರೆ.

ನಾವು ರಾಮನನ್ನು ಆದರ್ಶ ಎಂದು ಪರಿಗಣಿಸಿ ಕುರಿ ಮಾಂಸ ತಿನ್ನುತ್ತೇವೆ. 14 ವರ್ಷಗಳ ಕಾಲ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರವನ್ನು ಹುಡುಕಲು ಎಲ್ಲಿಗೆ ಹೋಗುತ್ತಾನೆ ಎಂದು ಅವರು ಹೇಳಿದರು. ರಾಮ ಕ್ಷತ್ರಿಯ, ಕ್ಷತ್ರಿಯರು ಎಂದೂ ಮಾಂಸಹಾರಿಗಳು, ಹಾಗೆ ರಾಮ ಕೂಡ ಮಾಂಸಾಹಾರಿ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು