News Karnataka Kannada
Wednesday, May 01 2024
ಮಹಾರಾಷ್ಟ್ರ

ಮುಂಬೈ: ಮಹೀಂದ್ರಾ ಗ್ರೂಪ್ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ನಿಧನ

Keshub Mahindra, chairman of the Mahindra Group, passes away
Photo Credit : IANS

ಮುಂಬೈ: ಖ್ಯಾತ ಕೈಗಾರಿಕೋದ್ಯಮಿ, ಮಹೀಂದ್ರಾ ಗ್ರೂಪ್  ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಬುಧವಾರ ಬೆಳಿಗ್ಗೆ ಮುಂಬೈನಲ್ಲಿ ನಿಧನರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಸೋದರಳಿಯ ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮತ್ತು ಇತರ ಸಂಬಂಧಿಕರನ್ನು ಅಗಲಿದ್ದಾರೆ.

1984 ರ ಡಿಸೆಂಬರ್ ನಲ್ಲಿ ಭೋಪಾಲ್ ಅನಿಲ ಸೋರಿಕೆ ಸಂಭವಿಸಿದಾಗ ಮಹೀಂದ್ರಾ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಈ ಘಟನೆಗೆ ಸಂಬಂಧಿಸಿ  2010ರಲ್ಲಿ ಮಹೀಂದ್ರಾ ಮತ್ತು ಇತರರನ್ನು ನ್ಯಾಯಾಲಯವು 2010 ರಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿತ್ತು. ಬಳಿಕ  ಜಾಮೀನಿನ ಮೇಲೆ ಬಿಡುಗಡೆ  ಮಾಡಲಾಗಿತ್ತು.

ಅಕ್ಟೋಬರ್ 9, 1923 ರಂದು ಶಿಮ್ಲಾದಲ್ಲಿ ಜನಿಸಿದ ಮಹೀಂದ್ರಾ ತಮ್ಮ ಉನ್ನತ ಶಿಕ್ಷಣವನ್ನು ಪೆನ್ಸಿಲ್ವೇನಿಯಾ ವಾರ್ಟನ್ ಸ್ಕೂಲ್ ವಿವಿಯಲ್ಲಿ ಪಡೆದಿದ್ದರು. 1947 ರಲ್ಲಿ ಮಹೀಂದ್ರಾ  ಗ್ರೂಪ್ ಸೇರಿದರು.  1963 ರಲ್ಲಿ ಅದರ ಅಧ್ಯಕ್ಷರಾದರು.

ಒಂದು ಕಾಲದಲ್ಲಿ ರಸ್ತೆಗಳನ್ನು ಆಳಿದ ಜನಪ್ರಿಯ ವಿಲ್ಲಿಸ್ ಜೀಪ್ ಗಳಿಂದ ಪ್ರಾರಂಭಿಸಿ, ಎಂಜಿನಿಯರಿಂಗ್, ಕೃಷಿ ಉಪಕರಣಗಳು, ಶಿಕ್ಷಣ, ಏರೋಸ್ಪೇಸ್, ಐಟಿ, ವಸತಿ, ರಿಯಾಲ್ಟಿ, ಹಣಕಾಸು ಕ್ಷೇತ್ರಗಳಲ್ಲಿ ಮಹೀಂದ್ರಾ ಸಂಸ್ಥೆ ಯ ಹೆಸರು ಪ್ರಸಿದ್ಧಿ ಪಡೆಯುವಲ್ಲಿ ಕೇಶುಬ್  ಶ್ರಮ ಶ್ಲಾಘನೀಯವಾಗಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು