News Karnataka Kannada
Monday, April 29 2024
ಮಹಾರಾಷ್ಟ್ರ

3.7 ಕೋಟಿ ವಾರ್ಷಿಕ ವರಮಾನದ ಉದ್ಯೋಗ ಪಡೆದ ಐಐಟಿ ವಿದ್ಯಾರ್ಥಿ

IIT student gets job with an annual income of Rs 3.7 crore
Photo Credit : News Kannada

ಮುಂಬೈ: ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ-ಬಾಂಬೆ) ಸಂಸ್ಥೆಯ ವಿದ್ಯಾರ್ಥಿಯೊಬ್ಬ ವಾರ್ಷಿಕ ₹ 3.7 ಕೋಟಿಯ ಅತ್ಯುನ್ನತ ಅಂತರರಾಷ್ಟ್ರೀಯ ಉದ್ಯೋಗ ಪಡೆದುಕೊಂಡಿದ್ದಾರೆ. ಆದರೆ ಈ ಪ್ಲೇಸ್‌ ಮೆಂಟ್‌ ಡ್ರೈವ್‌ನಲ್ಲಿ ಉದ್ಯೋಗ ಪಡೆದ ವಿದ್ಯಾರ್ಥಿ ಹೆಸರನ್ನು ಸಂಸ್ಥೆ ಬಿಡುಗಡೆ ಮಾಡಿಲ್ಲ. ಅದೇ ರೀತಿ ಇದೇ ಸಂಸ್ಥೆಯ ವಿದ್ಯಾರ್ಥಿಯೊಬ್ಬ ದೇಶದೊಳಗೆ ₹ 1.7 ಕೋಟಿ ಪ್ಯಾಕೇಜ್‌ ನ ಉದ್ಯೋಗ ಪಡೆದಿದ್ದಾರೆ.

ಜುಲೈ 2022 ರಿಂದ ಜೂನ್ 2023 ರವರೆಗಿನ ಕ್ಯಾಂಪಸ್ ಪ್ಲೇಸ್‌ಮೆಂಟ್ ಅವಧಿಯಲ್ಲಿ 2,174 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಐಐಟಿ ಬಾಂಬೆ ವಿದ್ಯಾರ್ಥಿಗಳು 65 ಸಾಗರೋತ್ತರ ಉದ್ಯೋಗ ಗಳಿಸಿಕೊಂಡಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಋತುವಿನಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ನೇಮಕಗೊಂಡಿದ್ದಾರೆ. ಆದಾಗ್ಯೂ, 302 ವಿದ್ಯಾರ್ಥಿಗಳು ಐಟಿ/ಸಾಫ್ಟ್‌ವೇರ್ ವಲಯದಲ್ಲಿ 88 ಕ್ಕೂ ಹೆಚ್ಚು ಕಂಪನಿಗಳಿಂದ ಉದ್ಯೋಗ ಪಡೆದಿದ್ದಾರೆ. ವ್ಯಾಪಾರ, ಹಣಕಾಸು ಮತ್ತು ಫಿನ್‌ಟೆಕ್ ಕಂಪನಿಗಳಿಗೆ ಹೆಚ್ಚಿನ ನೇಮಕಾತಿ ನಡೆದಿದೆ. ಒಟ್ಟಾರೆಯಾಗಿ, 2022-23 ಪ್ಲೇಸ್‌ಮೆಂಟ್ ಡ್ರೈವ್‌ನಲ್ಲಿ 82 ಪ್ರತಿಶತ ವಿದ್ಯಾರ್ಥಿಗಳು ಯಶಸ್ವಿಯಾಗಿ ಉದ್ಯೋಗ ಪಡೆದಿದ್ದಾರೆ ಎಂದು ಐಐಟಿ ಬಾಂಬೆ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು