News Karnataka Kannada
Thursday, April 25 2024
ಮಹಾರಾಷ್ಟ್ರ

ಏರ್‌ ಇಂಡಿಯಾಗೆ ₹30 ಲಕ್ಷ ದಂಡ; ವಿಮಾನ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಶಿಕ್ಷೆ

ಮುಂಬೈ ವಿಮಾನ ನಿಲ್ದಾಣದಲ್ಲಿ ವೀಲ್‌ಚೇರ್‌ ಸಿಗದ ಕಾರಣ 1.5 ಕಿಮೀ ದೂರ ನಡೆದು ಹೃದಯಾಘಾತಕ್ಕೆ ಒಳಗಾಗಿ 80 ವರ್ಷದ ಪ್ರಯಾಣಿಕ ಸಾವಿಗೀಡಾಗಿದ್ದು, ಅಗತ್ಯವಿರುವಷ್ಟು ಗಾಲಿಕುರ್ಚಿಗಳನ್ನು ಹೊಂದಿರದ ಕಾರಣಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಏರ್ ಇಂಡಿಯಾಗೆ ರೂ.30 ಲಕ್ಷ ದಂಡ ವಿಧಿಸಿದೆ.
Photo Credit : News Kannada

ನವದೆಹಲಿ: ಮುಂಬೈ ವಿಮಾನ ನಿಲ್ದಾಣದಲ್ಲಿ ವೀಲ್‌ಚೇರ್‌ ಸಿಗದ ಕಾರಣ 1.5 ಕಿಮೀ ದೂರ ನಡೆದು ಹೃದಯಾಘಾತಕ್ಕೆ ಒಳಗಾಗಿ 80 ವರ್ಷದ ಪ್ರಯಾಣಿಕ ಸಾವಿಗೀಡಾಗಿದ್ದು, ಅಗತ್ಯವಿರುವಷ್ಟು ಗಾಲಿಕುರ್ಚಿಗಳನ್ನು ಹೊಂದಿರದ ಕಾರಣಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಏರ್ ಇಂಡಿಯಾಗೆ ರೂ.30 ಲಕ್ಷ ದಂಡ ವಿಧಿಸಿದೆ.

ಪತ್ನಿಯೊಂದಿಗೆ ನ್ಯೂಯಾರ್ಕ್‌ನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದ 80 ವರ್ಷದ ಪ್ರಯಾಣಿಕ, ವೀಲ್‌ಚೇರ್ ಲಭ್ಯವಿಲ್ಲದ ಕಾರಣ 1.5 ಕಿಮೀ ದೂರ ನಡೆಯಬೇಕಾಯಿತು. ಇದರಿಂದ ಅವರಿಗೆ ಹೃದಯಾಘಾತವಾಗಿದ್ದು, ಆತ ಮುಂಬೈ ವಿಮಾನ ನಿಲ್ದಾಣದಲ್ಲೇ ಸಾವನ್ನಪ್ಪಿದ್ದಾರೆ.

ನಾಗರಿಕ ವಾಯುಯಾನ ಅಗತ್ಯಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್‌ಕ್ರಾಫ್ಟ್ ನಿಯಮಗಳು, 1937 ರ ಪ್ರಕಾರ ಏರ್ ಇಂಡಿಯಾಕ್ಕೆ 30 ಲಕ್ಷ ರೂಪಾಯಿ ಆರ್ಥಿಕ ದಂಡವನ್ನು ವಿಧಿಸಲಾಗಿದೆ ಎಂದು DGCA ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಯಾಣಿಕರಲ್ಲಿ ಅಂಗವಿಕಲರು ಅಥವ ಚಲನಶೀಲತೆ ಕಡಿಮೆಯಾದವರು ಇದ್ದಲ್ಲಿ ಅಂತಹವರಿಗೆ ಅಗತ್ಯ ಸೌಲಭ್ಯ ಒದಗಿಸದೇ ಇರುವುದು ವಿಮಾನ ನಿಯಮಗಳು, 1937 ರ ಉಲ್ಲಂಘನೆಯಾಗಿದೆ.

ತಪ್ಪಿತಸ್ಥ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಏರ್ ಇಂಡಿಯಾ ಮಾಹಿತಿ ನೀಡಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು