News Karnataka Kannada
Tuesday, April 30 2024
ಮಹಾರಾಷ್ಟ್ರ

ರೈಲು ಬರುತ್ತಿದ್ದಂತೆ ಮಗುವನ್ನು ಎಳೆದುಕೊಂಡು ಹಳಿಗೆ ಹಾರಿದ ತಂದೆ: ಪ್ರಾಣಾಪಾಯದಿಂದ ಮಗು ಪಾರು

June. Vande Bharat train service between Bengaluru and Dharwad to start from May 27
Photo Credit : IANS

ಥಾಣೆ(ಫೆ.18) : ರೈಲು ಬರುತ್ತಿದ್ದಂತೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನು ಎಳೆದುಕೊಂಡು ರೈಲ್ವೆ ಹಳಿಗೆ ಹಾರಿದ್ದು, ಈ ದುರಂತದಲ್ಲಿ ಮಗು ಯಾವುದೇ ಹಾನಿಯಾಗದೆ ಬದುಕುಳಿದಿದ್ದು, ತಂದೆ ಸಾವನ್ನಪ್ಪಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣದ ಸಮೀಪದ ವಿಠಲವಾಡಿ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಘಟನೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಮಗು ತನ್ನ ಕೈಯನ್ನು ಬಿಡಿಸಿಕೊಳ್ಳಲು ಯತ್ನಿಸಿದರು ಬಿಡದ ತಂದೆ ರೈಲು ಬರುತ್ತಿದ್ದಂತೆ ಮಗುವನ್ನು ಎಳೆದುಕೊಂಡು ರೈಲಿನ ಮುಂದೆ ಬೀಳುತ್ತಾನೆ. ಆದರೆ ಅದೃಷ್ಟ ಚೆನ್ನಾಗಿತ್ತೇನೋ ಮಗು ಯಾವುದೇ ಸಣ್ಣ ಪುಟ್ಟ ಗಾಯವೂ ಆಗದೇ ಪವಾಡಸದೃಶವಾಗಿ ಬದುಕಿಕೊಂಡಿದೆ ಎಂದು ತಿಳಿದು ಬಂದಿದೆ.

ಭರತ್‌ ಘಂಡಟ್ ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿ ಹಳಿಯ ಪಕ್ಕ ನಿಂತಿದ್ದು, ರೈಲು ಬರುತ್ತಿದ್ದಂತೆ ಮಗುವನ್ನು ಎಳೆದುಕೊಂಡು ಹಳಿಗೆ ಹಾರುತ್ತಾನೆ. ರೈಲು ಚಕ್ರಕ್ಕೆ ಸಿಲುಕಿದ ಆತನನ್ನು ಎಳೆದುಕೊಂಡು ಹೋಗುತ್ತದೆ. ಆದರೆ ಮಗು ಕಾಣಿಸುವುದಿಲ್ಲ. ಆದರೆ ಸ್ಥಳೀಯ ವರದಿ ಪ್ರಕಾರ ಮಗು ಸಣ್ಣ ತರಚು ಗಾಯವೂ ಆಗದೇ ಸುರಕ್ಷಿತವಾಗಿದ್ದು, ತಂದೆಯ ದೇಹ ಹಳಿಗೆ ಸಿಲುಕಿ ಛಿದ್ರ ಛಿದ್ರವಾಗಿದೆ.

ಇನ್ನು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಪ್ರಮೋದ್‌ ಅಂಧಲೆ ಎಂದು ಗುರುತಿಸಲಾಗಿದೆ. ಇವರು ಬೃಹತ್‌ ಮುಂಬೈ ಸಾರಿಗೆ ಇಲಾಖೆಯಲ್ಲಿ ಡ್ರೈವರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಥಾಣೆ ಜಿಲ್ಲೆಯ ಉಲ್ಲಾಸನಗರದಲ್ಲಿರುವ ಶಾಂತಿನಗರದ ನಿವಾಸಿ ಎಂದು ತಿಳಿದು ಬಂದಿದೆ. ಈ ವ್ಯಕ್ತಿ ಸಂಜೆ 6 ಗಂಟೆ ಸುಮಾರಿಗೆ ತನ್ನ 6 ವರ್ಷದ ಪುತ್ರ ಸ್ವರಾಜ್‌ನೊಂದಿಗೆ ವಿಠಲವಾಡಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಬಳಿಕ ಮುಂಬೈಗೆ ತೆರಳುತ್ತಿದ್ದ ಡೆಕ್ಕನ್‌ ಎಕ್ಸ್‌ಪ್ರೆಸ್ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ಯುವಕನೋರ್ವ ಚಲಿಸುತ್ತಿರುವ ರೈಲಿನಿಂದ ಇಳಿಯಲು ಹೋಗಿ ಜಾರಿ ಕೆಳಗೆ ಬಿದ್ದಿದ್ದ. ತೆಲಂಗಾಣದ ವಾರಂಗಲ್ ರೈಲು ನಿಲ್ದಾಣದಲ್ಲಿಈ ಘಟನೆ ನಡೆದಿತ್ತು. ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆ ಯುವಕನನ್ನು ದೊಡ್ಡ ದುರಂತದಿಂದ ರಕ್ಷಿಸಿತ್ತು. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿದ ನಂತರ ವ್ಯಕ್ತಿ ಬಿದ್ದಿದ್ದು, ಕರ್ತವ್ಯದಲ್ಲಿದ್ದ ಇಬ್ಬರು ಆರ್‌ಪಿಎಫ್ ಅಧಿಕಾರಿಗಳು ಆತನನ್ನು ರಕ್ಷಿಸಿದ್ದಾರೆ. ಇದರ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರೈಲ್ವೆ ಸಚಿವಾಲಯವು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರೈಲು ನಿಧಾನವಾಗಿ ಚಲಿಸುವಾಗ ಇಬ್ಬರು ಆರ್‌ಪಿಎಫ್ ಸಿಬ್ಬಂದಿ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಾ ಹೋಗುತ್ತಿರುತ್ತಾರೆ. ಈ ವೇಳೆ ಚಲಿಸುತ್ತಿದ್ದ ರೈಲಿನಿಂದ ಒಬ್ಬ ಪ್ರಯಾಣಿಕನು ಹಠಾತ್ತನೆ ಇಳಿಯಲು ಹೋಗಿ ಜಾರಿ ಬೀಳುತ್ತಾನೆ. ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಆತನನ್ನು ಹಿಡಿದು ಸುರಕ್ಷಿತವಾಗಿ ಮೇಲೆಳೆದುಕೊಳ್ಳುತ್ತಾರೆ. ಫೆಬ್ರವರಿ 8 ರಂದು ಸಂಜೆ 6:15 ರ ವೇಳೆ ಈ ಘಟನೆ ನಡೆದಿದೆ.

ಫೆಬ್ರವರಿ 9 ರಂದು ಭಾರತೀಯ ರೈಲ್ವೆ ಇಲಾಖೆ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, 32 ಸೆಕೆಂಡುಗಳ ಈ ವೀಡಿಯೊವನ್ನು ಇದುವರೆಗೆ 22,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ರೈಲ್ವೆ ಇಲಾಖೆ ಸೇವೆ ಮತ್ತು ಕಾಳಜಿಗೆ ಬದ್ಧವಾಗಿದೆ ತೆಲಂಗಾಣದ ವಾರಂಗಲ್ ರೈಲು ನಿಲ್ದಾಣದಲ್ಲಿ ಕರ್ತವ್ಯ ನಿರತ ಆರ್‌ಪಿಎಫ್ ಸಿಬ್ಬಂದಿ ಅಮೂಲ್ಯ ಜೀವವನ್ನು ಉಳಿಸಿದ್ದಾರೆ. ಚಲಿಸುತ್ತಿರುವ ರೈಲನ್ನು ಎಂದಿಗೂ ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ರೈಲ್ವೇ ಎಲ್ಲಾ ಪ್ರಯಾಣಿಕರನ್ನು ವಿನಂತಿಸುತ್ತದೆ ಎಂದು ಬರೆದು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು