ಮುಂಬೈ: ಅಪ್ರಾಪ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವೃದ್ಧನಿಗೆ ಜೈಲು ಶಿಕ್ಷೆ

ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ 72 ವರ್ಷದ ವ್ಯಕ್ತಿಗೆ ಪೋಕ್ಸೊ ಪ್ರಕರಣದಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ, 2018 ರಲ್ಲಿ ತನ್ನ ಅಪ್ರಾಪ್ತ ನೆರೆಯವರಿಗೆ ಲೈಂಗಿಕ ಕಿರುಕುಳ ನೀಡಿದ 72 ವರ್ಷದ ವ್ಯಕ್ತಿಯನ್ನು ದೋಷಿ ಎಂದು ತೀರ್ಪು ನೀಡಿದೆ.

ವಿಶೇಷ ನ್ಯಾಯಾಧೀಶರು ಅವಿನಾಶ್ ಧುರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, 10,000 ರೂ. ದಂಡವನ್ನೂ ವಿಧಿಸಿದ್ದಾರೆ. ವರದಿ ಪ್ರಕಾರ, ಜನವರಿ 31, 2018 ರಂದು, ಬಾಲಕಿ ಶಾಲೆಯಿಂದ ಮಧ್ಯಾಹ್ನ 3 ಗಂಟೆಗೆ ಮರಳಿದ್ದಳು.

ಬಾಲಕಿಯನ್ನು ಒಬ್ಬಂಟಿಯಾಗಿ ನೋಡಿದ ಧುರಿ, 7 ವರ್ಷದ ಮಗುವಿಗೆ ಚಾಕೊಲೇಟ್ ನೀಡುವುದಾಗಿ ಆಮಿಷವೊಡ್ಡಿದ್ದಾನೆ. ಬಳಿಕ ಬಾಲಕಿಯನ್ನು ಕಟ್ಟಡದ ತಾರಸಿಗೆ ಕರೆದೊಯ್ದು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಅಲ್ಲದೆ ಘಟನೆ ಬಗ್ಗೆ ಯಾರಿಗಾದ್ರೂ ಹೇಳಿದ್ರೆ ಟೆರೇಸ್‌ನಿಂದ ಕೆಳಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾನೆ.

ಆದರೆ ಬಾಲಕಿ ತನ್ನ ಸಹೋದರಿ ಮತ್ತು ತಾಯಿಗೆ ಘಟನೆಯನ್ನು ಹೇಳಿದ್ದಾಳೆ. ನಂತರ ಆಕೆಯ ತಾಯಿ ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಕೋರ್ಟ್ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Gayathri SG

Recent Posts

ರೀಲ್ಸ್ ಸ್ಟಾರ್

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಗೊರವಿಕಲ್ಲು ಬಡಾವಣೆಯ ಶಿಕ್ಷಕಿ, ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಸ್ಟಾರ್ ಎನಿಸಿದ್ದ ಗೀತಾಶ್ರೀ ಶವ ಅವರ ಮನೆಯಲ್ಲೇ…

4 mins ago

ಚುನಾವಣಾ ಪ್ರಚಾರದ ಹಕ್ಕು “ಮೂಲಭೂತವಲ್ಲ”: ಕೇಜ್ರಿವಾಲ್ ಜಾಮೀನಿಗೆ ಇಡಿ ಆಕ್ಷೇಪ

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವುದಕ್ಕೆ ಜಾರಿ ನಿರ್ದೇಶನಾಲಯ ಗುರುವಾರ ವಿರೋಧಿಸಿದೆ.

13 mins ago

ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಆತ್ಮಹತ್ಯೆ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯ ಮನೆಯಲ್ಲಿ ಅತಿಥಿ ಉಪನ್ಯಾಸಕಿಯೂಬ್ಬರು ನೇಣುಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

1 hour ago

ಎಚ್​.ಡಿ. ರೇವಣ್ಣಗೆ ಇನ್ನೂ ಮೂರು ದಿನ ಜೈಲೇ ಗತಿ!

 ಲೈಂಗಿಕ ಹಗರಣ ಆರೋಪದಲ್ಲಿ ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್​ ಕೇಸ್​ನಲ್ಲಿ ಬಂಧಿತರಾಗಿರುವ ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಜಾಮೀನು ವಿಚಾರಣೆ…

1 hour ago

ಪ್ರಜ್ವಲ್ ಪೆನ್‍ಡ್ರೈವ್ ಕೇಸ್; ಸಂತ್ರಸ್ತೆಗೆ ಮೂವರಿಂದ ಬೆದರಿಕೆ

ಭಾರೀ ಕೋಲಾಹಲ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರೆಂದು ಹೇಳಿಕೊಂಡು ಬಂದಿರುವ…

1 hour ago

ನೂರು ರೋಗಗಳಿಗೂ ಒಂದೇ ಔಷಧ ಪಾನೀಯ: ಎಳನೀರು

ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ  ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ.…

1 hour ago