News Karnataka Kannada
Saturday, April 27 2024
ಮಹಾರಾಷ್ಟ್ರ

ಪುಣೆ :ಮರ್ಸಿಡಿಸ್ ಬೆನ್ಜ್ ಕಾರ್ಖಾನೆಯೊಳಗೆ ಚಿರತೆ!

Chithah
Photo Credit :

ಪುಣೆ : ಮರ್ಸಿಡಿಸ್ ಬೆನ್ಜ್ ಕಾರ್ಖಾನೆಯೊಳಗೆ ಚಿರತೆಯೊಂದು ನುಗ್ಗಿದ ಪರಿಣಾಮ, ಕೈಗಾರಿಕೆಯಲ್ಲಿ ಆರು ಗಂಟೆಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಲಾಗಿರೋ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಸೋಮವಾರ ಬೆಳಗಿನ ಜಾವ ಐಷಾರಾಮಿ ಕಾರು ತಯಾರಿಕಾ ಕಾರ್ಖಾನೆ ಆವರಣದಲ್ಲಿ ಚಿರತೆಯೊಂದು ಓಡಾಡುವುದನ್ನು ಕಾರ್ಮಿಕರು ನೋಡಿ ಭೀತಿಗೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಬಲೆಗೆ ಕೆಡವಲು ಕಾರ್ಯಾಚರಣೆ ಕೈಗೊಂಡಿದೆ.

ಪುಣೆಯ ವಿಸ್ತಾರವಾದ ಮರ್ಸಿಡಿಸ್ ಬೆನ್ಜ್ ಕಾರ್ಖಾನೆಯೊಳಗೆ ಚಿರತೆಯೊಂದು ಅಡ್ಡಾಡಿದೆ.ಇದರಿಂದಾಗಿ ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಅರಣ್ಯ ಇಲಾಖೆ ಸಿಬ್ಬಂದಿಯ ಕಠಿಣ ಪ್ರಯತ್ನದ ನಂತರ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.

ಮುಂಜಾಗ್ರತಾ ಕ್ರಮವಾಗಿ, ಸ್ಥಳೀಯ ಪೊಲೀಸರ ಸಲಹೆಯ ಮೇರೆಗೆ ತಕ್ಷಣ ಅಲ್ಲಿದ್ದ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಸುಮಾರು ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕಾರ್ಖಾನೆಯ ಶೆಡ್ ಒಂದರ ಮಹಡಿಯಲ್ಲಿ ಅಡಗಿದ್ದ ಚಿರತೆಯನ್ನು ಪತ್ತೆ ಹಚ್ಚಿ ಸೆರೆಹಿಡಿಯಲಾಯಿತು. ಗಂಡು ಚಿರತೆಯಾಗಿದ್ದು, ಅದಕ್ಕೆ ಸುಮಾರು 2 ರಿಂದ 3 ವರ್ಷ ವಯಸ್ಸಾಗಿರಬಹುದು ವನ್ಯಜೀವಿ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು