ನೀಲಿ ಚಿತ್ರ ಪ್ರಕರಣ ; ನಿರ್ಮಾಪಕ ರಾಜ್‌ಕುಂದ್ರಾ ಅರ್ಜಿ ತಿರಸ್ಕಾರ

ಮುಂಬೈ: ನೀಲಿ ಚಿತ್ರಗಳನ್ನು ನಿರ್ಮಾಣ ಮಾಡಿ ವಿತರಣೆ ಮಾಡುತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಂಧನವನ್ನು ಪ್ರಶ್ನಿಸಿ ಉದ್ಯಮಿ ಮತ್ತು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇಂದು ತಿರಸ್ಕರಿಸಿದೆ. ಕುಂದ್ರಾ ಸಹಚರ ರಿಯಾನ್ ಥಾರ್ಪ್ ಅವರ ಅರ್ಜಿಯನ್ನೂ ಸಹ ನ್ಯಾಯಾಲಯ ತಿರಸ್ಕರಿಸಿದೆ.
ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಗಡ್ಕರಿ ಅವರಿದ್ದ ಏಕ ಸದಸ್ಯ ಪೀಠವು ಕುಂದಾ ಮತ್ತು ಥಾರ್ಪ್ ಅರ್ಜಿಗಳನ್ನು ತಿರಸ್ಕರಿಸಿದೆ. ಮಹಾನಗರ ದಂಡಾಧಿಕಾರಿಗಳ ಆದೇಶದಂತೆ ಇವರಿಬ್ಬರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ನ್ಯಾಯಾಂಗ ಬಂಧನದಲ್ಲಿ ಇರಿಸಿರುವುದು ಕಾನೂನು ಮಿತಿಯಲ್ಲಿಯೇ ಇದೆ. ಹೀಗಾಗಿ ಇದರಲ್ಲಿ ಮಧ್ಯಸ್ಥಿಕೆ ವಹಿಸುವ ಅಗತ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ. ತಮ್ಮನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ. ಹೀಗಾಗಿ ಕೂಡಲೇ ತಮ್ಮನ್ನು ಬಿಡುಗಡೆ ಮಾಡಬೇಕು ಮತ್ತು ಬಂಧನಕ್ಕೆ ಸಂಬಂಧಿಸಿದ ದಂಡಾಧಿಕಾರಿಯವರ ಆದೇಶವನ್ನು ರದ್ದುಗೊಳಿಸಬೇಕೆಂದು ಕುಂದ್ರಾ ಮತ್ತು ಥಾರ್ಪ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

 

Indresh KC

Recent Posts

ಯೆನೆಪೋಯದಲ್ಲಿ ದಕ್ಷಿಣ ಭಾರತ ಅಂತರ್ ಕಾಲೇಜು ಅಲೈಡ್ ಸ್ಪೋರ್ಟ್ಸ್ ಫೆಸ್ಟ್

ಸೌತ್ ಇಂಡಿಯಾ ಇಂಟರ್‌ಕಾಲೇಜಿಯೇಟ್ ಅಲೈಡ್ ಸ್ಪೋರ್ಟ್ಸ್ ಫೆಸ್ಟ್, ಮೇ 13 ರಿಂದ ಮೇ 16, 2024 ರವರೆಗೆ ಯೆನೆಪೊಯ ಸ್ಕೂಲ್…

6 mins ago

ಮೇ.19 ರಂದು 6ನೇ ತರಗತಿ ಪ್ರವೇಶಾತಿ ಪರೀಕ್ಷೆ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಯಿ ವಸತಿ ಶಾಲೆಗಳು, ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳು ಹಾಗೂ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳಿಗೆ 2024-25ನೇ…

14 mins ago

ಪ್ರಜ್ವಲ್ ರೇವಣ್ಣ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಆರ್‌ಎಸ್ ಪಕ್ಷ ಹೋರಾಟ

ಹೆಣ್ಣು ಮಕ್ಕಳನ್ನು ತನ್ನ ಆಟದ ಸಾಮಾನೆಂದು ಬಳಸಿಕೊಂಡ ಪ್ರಜ್ವಲ್ ರೇವಣ್ಣ ಹಾಗೂ ಅವರ ಕುಟುಂಬಸ್ಥರ ಮೇಲೆ ಕಾನೂನಿನ ಕ್ರಮವನ್ನು ತೆಗೆದುಕೊಳ್ಳಬೇಕೆಂದುಕಳೆ…

25 mins ago

ಯಕ್ಷ ಧ್ರುವ ಪಟ್ಲ ಫೌಂಡೇಶನ್ : ಪಂಚಮ ವಾರ್ಷಿಕ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ)ನ ಮಂಗಳೂರು ನಗರ ಘಟಕದ ಪಂಚಮ ವಾರ್ಷಿಕ ಸಂಭ್ರಮವು ಮೇ 23 ಗುರುವಾರ…

25 mins ago

ರಫಾದಲ್ಲಿ ಇಸ್ರೇಲ್‌ ದಾಳಿ : ಭಾರತ ಮೂಲದ ವಿಶ್ವಸಂಸ್ಥೆ ಸಿಬ್ಬಂದಿ ಸಾವು

ಹಮಾಸ್‌ ವಿರುದ್ಧ ಇಂದಿಗೂ ಕದನ ವಿರಾಮ ಘೋಷಿಸಿದ ಇಸ್ರೇಲ್‌, ಹಮಾಸ್‌ ಉಗ್ರರ ಅಡಗು ತಾಣವಾಗಿರುವ ಗಾಜಾ ನಗರದ ಮೇಲೆ ಸತತವಾಗಿ…

37 mins ago

“ಕಾರು ಅಪಘಾತದಲ್ಲಿ ಮೃತಪಟ್ಟಿಲ್ಲ ಕಿರುತೆರೆ ನಟಿ ಪವಿತ್ರಾ”

ಕಿರುತೆರೆ ಪವಿತ್ರಾ ಕಾರು ಅಪಘಾತದಲ್ಲಿ ಮೃತಪಟ್ಟೇ ಇಲ್ಲ ಎಂದು ಗೆಳೆಯ ಚಂದು ಅವರು ಹೇಳಿದ್ದಾರೆ. ಅಲ್ಲಿ ನಡೆದಿದ್ದು ಏನು ಎಂಬುದನ್ನು…

59 mins ago