ಎಲ್ಲವೂ ಅಂದುಕೊಂಡತೆ ಆದರೆ ಇದು ದೇಶದಲ್ಲಿ ವಾಯುಮಾಲಿನ್ಯ ತಡೆಗಟ್ಟುವಲ್ಲಿ ಬಹುದೊಡ್ಡ ಉಪಕ್ರಮವಾಗಲಿದೆ.
ಆದೇಶದಲ್ಲಿ, ಬಿಎಂಡಬ್ಲ್ಯು, ಮರ್ಸಿಡಿಸ್ನಿಂದ ಹಿಡಿದು ಟಾಟಾ, ಮಹಿಂದ್ರಾವರೆಗೆ ದೇಶದಲ್ಲಿರುವ ಪ್ರತಿಯೊಂದು ಕಾರು ಉತ್ಪಾದಕ ಕಂಪನಿಯೂ ಫ್ಲೆಕ್ಸ್ ಎಂಜಿನ್ ಕಾರುಗಳನ್ನು ಉತ್ಪಾದನೆ ಮಾಡುವುದು ಕಡ್ಡಾಯವಾಗಲಿದೆ. ಬಜಾಜ್ ಹಾಗೂ ಟಿವಿಎಸ್ ಕಂಪನಿಗಳಿಗೆ ಈಗಾಗಲೇ ಅವರ ವಾಹನಗಳಲ್ಲಿ ಫ್ಲೆಕ್ಸ್ ಎಂಜಿನ್ ಅಳವಡಿಸಲು ಹೇಳಿದ್ದೇನೆ. ಅದನ್ನು ಮಾಡುವವರೆಗೂ ನನ್ನಲ್ಲಿಗೆ ಬರಬೇಡಿ ಎಂದೂ ಹೇಳಿದ್ದೇನೆ’ ಎಂದು ಗಡ್ಕರಿ ಹೇಳಿದರು.
‘ನನಗೊಂದು ಆಸೆಯಿದೆ. ನನ್ನ ಜೀವಮಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ ನಿಲ್ಲಬೇಕು. ಅದಕ್ಕೆ ಬದಲಿಯಾಗಿ ರೈತರು ತಮ್ಮ ಉತ್ಪನ್ನವಾದ ಎಥೆನಾಲ್ ನೀಡಬೇಕು. ಅದನ್ನು ಬಳಸಿ ವಾಹನಗಳು ಓಡಬೇಕು’ ಎಂದೂ ಅವರು ಶುಕ್ರವಾರ ಪುಣೆಯಲ್ಲಿ ಮೇಲ್ಸೇತುವೆಯೊಂದಕ್ಕೆ ಅಡಿಗಲ್ಲು ಹಾಕುವ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.