ಪುಣೆ : ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿಗೆ ಭಾರತದಲ್ಲಿ ಮೊದಲ ಬಲಿಯಾಗಿದೆ.ಮಹಾರಾಷ್ಟ್ರದ ಪುಣೆಯ ವ್ಯಕ್ತಿಯೊಬ್ಬರು ಒಮಿಕ್ರಾನ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಈ ಮೂಲಕ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್ ನಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವಾಗಿದೆ. 52 ವರ್ಷದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದರು. ತಪಾಸಣೆ ವೇಳೆ ಒಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ.
ನೈಜೀರಿಯಾಕ್ಕೆ ಹೋಗಿ ಬಂದ ಮಧುಮೇಹ ಪೀಡಿತ 52 ವರ್ಷದ ವ್ಯಕ್ತಿಯು ಪಿಂಪ್ರಿ ಆಸ್ಪತ್ರೆಯಲ್ಲಿ ಡಿಸೆಂಬರ್ 28 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಶುಕ್ರವಾರ ಅವರ ಪರೀಕ್ಷಾ ವರದಿ ಲಭ್ಯವಾಗಿದ್ದು, ಒಮಿಕ್ರಾನ್ ವೈರಸ್ ದೃಢಪಟ್ಟಿದೆ.