News Karnataka Kannada
Thursday, April 18 2024
Cricket
ಮಹಾರಾಷ್ಟ್ರ

ಹನುಮಾನ್ ಚಾಲೀಸಾವನ್ನು ಮನೆಯ ಅಥವಾ ದೇಗುಲಗಳಲ್ಲಿ ಪಠಿಸಬೇಕು: ಸಂಜಯ್ ರಾವತ್

Untitled 108
Photo Credit :

ಮುಂಬೈ : ಹನುಮಾನ್ ಚಾಲೀಸಾ ವಿಚಾರದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಂದ್ರ ಫಡ್ನವೀಸ್ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.

ಹನುಮಾನ್ ಚಾಲೀಸಾ ಪಠಣ ಮಾಡುವುದರಿಂದ ಯಾರಿಗೂ ಶಿಕ್ಷೆಯಾಗುವುದಿಲ್ಲ. ಯಾರಾದರೂ ಹನುಮಾನ್ ಚಾಲೀಸಾವನ್ನು ಪಠಿಸುವುದಾದರೇ ಅದನ್ನು ಅವರ ಮನೆ ಅಥವಾ ದೇಗುಲದಲ್ಲಿ ಪಠಿಸಬೇಕು. ಆದರೆ ಬೇರೆಯವರ ಮನೆಗೆ ನುಗ್ಗಿ ಅವರ ಶಾಂತಿಯನ್ನು ಹಾಳು ಮಾಡುವುದು ತಪ್ಪು ಎಂದರು.ಈ ಹಿಂದೆ ಫಡ್ನವಿಸ್ ಮಾತನಾಡಿ, ನಾವೆಲ್ಲರೂ ಹನುಮಾನ್ ಚಾಲೀಸಾವನ್ನು ಜಪಿಸುತ್ತೇವೆ.

ಸರ್ಕಾರಕ್ಕೆ ಧೈರ್ಯವಿದ್ದರೆ, ನಮ್ಮ ಮೇಲೆ ದೇಶದ್ರೋಹದ ಆರೋಪ ಹೊರಿಸಲು ಪ್ರಯತ್ನಿಸಿ ಎಂದ ಅವರು, ರಾಜ್ಯ ಸರ್ಕಾರವು ಹಿಟ್ಲರ್ ಪಾತ್ರವನ್ನು ವಹಿಸಿಕೊಂಡಿದೆ ಎಂದು ಆರೋಪಿಸಿದ್ದರು. ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ್ದ ಸಂಸದ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು. ಇದಕ್ಕೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು