News Karnataka Kannada
Thursday, April 18 2024
Cricket
ಮಹಾರಾಷ್ಟ್ರ

ಮಹಾರಾಷ್ಟ್ರ: ಒಂದೇ ಕುಟುಂಬದ ಐವರು ಕ್ವಾರಿಯಲ್ಲಿ ಮುಳುಗಿ ಸಾವು

17-year-old girl found murdered in field
Photo Credit :

ಥಾಣೆ (ಮಹಾರಾಷ್ಟ್ರ): ಡೊಂಬಿವಿಲಿ ಸಮೀಪದ ಸಂದಪ್ ಗ್ರಾಮದಲ್ಲಿ ಶನಿವಾರ ನೀರು ತುಂಬಿದ ಕ್ವಾರಿಯೊಂದರಲ್ಲಿ ಮೂವರು ಮಕ್ಕಳು ಸೇರಿದಂತೆ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಮೃತರನ್ನು ಮೀರಾ ಗಾಯಕ್ವಾಡ್, ಆಕೆಯ ಸೊಸೆ ಅಪೇಕ್ಷಾ ಮತ್ತು ಮೂವರು ಮೊಮ್ಮಕ್ಕಳಾದ ಮಯೂರೇಶ್, ಮೋಕ್ಷ ಮತ್ತು ನೀಲೇಶ್ ಎಂದು ಗುರುತಿಸಲಾಗಿದೆ.

ಕ್ವಾರಿಯಲ್ಲಿ ಕುಟುಂಬವು ಬಟ್ಟೆ ತೊಳೆಯುತ್ತಿದ್ದಾಗ 13 ವರ್ಷದ ಮೋಕ್ಷ ಕ್ವಾರಿಗೆ ಜಾರಿ ಬಿದ್ದನು. ಈ ವೇಳೆ ಅವನ ಸಹೋದರರು ಮತ್ತು ಇಬ್ಬರು ಮಹಿಳೆಯರು ಅವನನ್ನು ಉಳಿಸಲು ನೀರಿಗೆ ಇಳಿದರು. ಆದ್ರೆ, ಅವರೆಲ್ಲರೂ ಜೀವಂತವಾಗಿ ವಾಪಸ್‌ ಮೇಲೆ ಬರಲೇ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ತಂಡ ಎಲ್ಲಾ ಐದು ಮೃತದೇಹಗಳನ್ನು ಹೊರತೆಗೆದಿದ್ದು, ಅವರನ್ನು ಮರಣೋತ್ತರ ಪರೀಕ್ಷೆಗಾಗಿ ಶಾಸ್ತ್ರಿನಗರ ಆಸ್ಪತ್ರೆಗೆ ರವಾನಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು