News Karnataka Kannada
Saturday, April 13 2024
Cricket
ಮಹಾರಾಷ್ಟ್ರ

‘ಟಾಟಾ ನಿಯೋ’ ಆಯಪ್‌ ಬಿಡುಗಡೆ ಮಾಡಿದ ಟಾಟಾ ಗ್ರೂಪ್‌

Tata Neu
Photo Credit :

ಮುಂಬೈ : ಅಮೆಜಾನ್‌ ಮತ್ತು ಪ್ಲಿಪ್‌ಕಾರ್ಟ್‌ಗಳಿಗೆ ಸೆಡ್ಡು ಹೊಡೆಯುವ ಸಂಬಂಧ ಟಾಟಾ ಗ್ರೂಪ್‌, ‘ಟಾಟಾ ನಿಯೋ’ ಎಂಬ ಆಯಪ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಆಹಾರವನ್ನು ಆರ್ಡರ್ ಮಾಡುವುದರಿಂದ ಹಿಡಿದು ಬಟ್ಟೆ ಖರೀದಿಸುವವರೆಗೆ ಮತ್ತು ನಿಮ್ಮ ಏರ್‌ಟಿಕೆಟ್‌ಗಳನ್ನು ಖರೀದಿಸುವವರೆಗೆ, ಟಾಟಾ ನಿಯೋ ಬಹುತೇಕ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.

ಇದನ್ನು ಸೂಪರ್‌ ಆಯಪ್‌ ಎಂದು ಸಂಸ್ಥೆ ಕರೆದಿದ್ದು, ಪ್ಲೇಸ್ಟೋರ್‌ ಮತ್ತು ಆಯಪಲ್‌ ಸ್ಟೋರ್‌ನಲ್ಲೂ ಲಭ್ಯವಿದೆ. ವಿಶೇಷವೆಂದರೆ, ಈ ಆಯಪ್‌ ಮೂಲಕವೇ ಕ್ರೋಮ್‌, ಬಿಗ್‌ ಬ್ಯಾಸ್ಕೆಟ್‌, 1ಎಂಜಿ ಸೇರಿದಂತೆ ಹಲವು ಸಂಸ್ಥೆಗಳ ಸೇವೆಗಳನ್ನು ಪಡೆಯಬಹುದಾಗಿದೆ.

ಅಂದರೆ, ಮನೆಗೆ ಬೇಕಾದ ವಸ್ತುಗಳಿಂದ ಹಿಡಿದು, ವಿಮಾನದಲ್ಲಿ ಓಡಾಡಲು ಟಿಕೆಟ್‌ ಅನ್ನೂ ಬುಕ್‌ ಮಾಡಬಹುದಾಗಿದೆ. ಇದರಲ್ಲೇ ಟಾಟಾ ಪೇ ಎಂಬ ಯುಪಿಐ ಆಧರಿತ ಪೇಮೆಂಟ್‌ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು