News Karnataka Kannada
Monday, April 29 2024
ಮಧ್ಯ ಪ್ರದೇಶ

1.13 ಕೋಟಿ ರೂ. ಸಂಬಳದ ಜಾಬ್‌ ಗಿಟ್ಟಿಸಿಕೊಂಡ ಭಾರತೀಯ ವಿದ್ಯಾರ್ಥಿ

Rs 1.13 crore Indian student gets salaried job
Photo Credit : News Kannada

ಇಂದೋರ್:‌ ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳು ದೊಡ್ಡ ಮಟ್ಟದ ವೇತನ ಪ್ಯಾಕೇಜ್‌ ಪಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಇಲ್ಲೊಬ್ಬ ವಿದ್ಯಾರ್ಥಿ 1.13 ಕೋಟಿ ರೂಪಾಯಿ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಾಹಿಲ್ ಅಲಿ, ನೆದರ್‌ಲ್ಯಾಂಡ್‌ನ ತಂತ್ರಜ್ಞಾನ ಸಂಸ್ಥೆ ಅಡ್ಯೆನ್‌ನಿಂದ ವಾರ್ಷಿಕ 1.13 ಕೋಟಿ ರೂಪಾಯಿ ಪ್ಯಾಕೇಜ್‌ (ಸಂಬಳ) ಪಡೆಯುವ ಮೂಲಕ ತನ್ನ ಕಾಲೇಜಿನಲ್ಲಿ ದಾಖಲೆಗಳನ್ನು ಮುರಿದಿದ್ದಾರೆ. ಡಿಎವಿವಿಯ ಐಐಪಿಎಸ್ ಕಾಲೇಜಿನಲ್ಲಿ ಎಂಟೆಕ್ ಪದವಿಯನ್ನು ಪೂರ್ಣಗೊಳಿಸಿದ ಸಾಹಿಲ್ ಫೆಬ್ರವರಿ 2023ರಲ್ಲಿ ಅಡ್ಯೆನ್‌ಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇರಿದರು.

ಸಾಹಿಲ್ ಇಂದೋರ್‌ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸ್ಟಡೀಸ್‌ನಿಂದ 5 ವರ್ಷಗಳ ಇಂಟಿಗ್ರೇಟೆಡ್ ಎಂಟೆಕ್ ಕೋರ್ಸ್ ಮಾಡಿದ್ದಾರೆ. ಇದೇ ವರ್ಷದ ಜನವರಿಯಲ್ಲಿ ನಡೆದ ಪ್ಲೇಸ್‌ಮೆಂಟ್ ಸೆಷನ್‌ನಲ್ಲಿ ನೆದರ್‌ಲ್ಯಾಂಡ್‌ನ ಕಂಪನಿಯೊಂದು 1.13 ಕೋಟಿ ರೂಪಾಯಿ ಪ್ಯಾಕೇಜ್‌ನಲ್ಲಿ ಅವರಿಗೆ ಉದ್ಯೋಗ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು