ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ಯುವಕನೊಬ್ಬ ಅಡುಗೆ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಮೃತ ಯುವಕನನ್ನು, ರೇವಾ ಮೂಲದ ವಿವೇಕ್ ಸೋನಿ (22) ಎಂದು ಗುರುತಿಸಲಾಗಿದೆ. ಈತ ಭೋಪಾಲ್ನ ಟಿಐಟಿ ಕಾಲೇಜಿನ ಎಂಬಿಎ ವಿದ್ಯಾರ್ಥಿಯಾಗಿದ್ದ. ಅಯೋಧ್ಯನಗರ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ. ಸೋಮವಾರ ರಾತ್ರಿ 8 ಗಂಟೆಯ (ಡಿ.25 ರಂದು) ಸುಮಾರಿಗೆ ಫ್ಲಾಟ್ನಲ್ಲಿ ಓದಲು ಸಿದ್ದತೆ ನಡೆಸುತ್ತಿದ್ದರು.
ಸ್ನೇಹಿತರೊಂದಿಗೆ ಒಟ್ಟಿಗೆ ಓದುವ ಮೊದಲು ಊಟ ಮಾಡುವ ಎಂದು ಹೇಳಿ ವಿವೇಕ್ ಅಡುಗೆ ಮನೆಗೆ ಹೋಗಿದ್ದಾರೆ. ಈ ವೇಳೆ ವಿವೇಕ್ ತನಗೆ ಎದೆನೋವು ಆಗುತ್ತಿದೆ ಎಂದು ಸ್ನೇಹಿತರ ಬಳಿ ಹೇಳಿದ್ದಾರೆ. ಆದರೆ ನೋವಿನಲ್ಲೇ ಅಡುಗೆ ಮಾಡಲು ಕಿಚನ್ ಗೆ ತೆರಳಿದ್ದಾರೆ. ತರಕಾರಿ ಕತ್ತರಿಸುವ ವೇಳೆ ಎದೆಗೆ ಕೈಯಿಟ್ಟುಕೊಂಡೇ ವಿವೇಕ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರ ಸ್ನೇಹಿತರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದರು.