ಮಧ್ಯಪ್ರದೇಶ: ಕೋಣೆಯಲ್ಲಿ ದಂಪತಿ ಮೃತದೇಹ ಪತ್ತೆ

ಮಧ್ಯಪ್ರದೇಶ : ಮಧ್ಯಪ್ರದೇಶದ ಭೋಪಾಲ್‌ನ ಶಾಹಪುರದಲ್ಲಿ ಕೋಣೆಯೊಳಗೆ ವಿವಾಹಿತ ಜೋಡಿಯೊಂದು ಶವವಾಗಿ ಪತ್ತೆಯಾಗಿದ್ದು, ಸಂಬಂಧಿಕರ ಮನೆಯಲ್ಲಿದ್ದ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೃತರನ್ನು ಜಿತೇಂದ್ರ ಮತ್ತು ರಂಜಿತಾ ಎಂದು ಗುರುತಿಸಾಗಿದೆ. ಹಾಸಿಗೆಯ ಮೇಲೆ ಮಹಿಳೆಯ ಶವ ಇದ್ದರೆ, ಗಂಡನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಪತಿ, ಪತ್ನಿಯನ್ನು ಕೊಂದ ನಂತರ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ತೋರುತ್ತದೆ. ಆದರೆ ವೈದ್ಯರು ಸತ್ತವರ ಕುತ್ತಿಗೆಯಲ್ಲಿ ಯಾವುದೇ ಗುರುತು ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಒಂದು ವರ್ಷದಿಂದ ದಂಪತಿ ಪ್ರತ್ಯೇಕವಾಗಿ ವಾಸಿವಾಗಿದ್ದು, ಪತ್ನಿ ರಂಜಿತಾ ವಿಚ್ಚೇದನವನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಂತೆ. ಕೆಲ ದಿನಗಳ ಹಿಂದೆ ಸಂಬಂಧಿ ಕಲುರಾಮ್ ಎಂಬುವವರ ಮನೆಗೆ ದಂಪತಿ ಆಗಮಿಸಿತ್ತು.

ಹೀಗಿರುವಾಗ ಬೆಳಿಗ್ಗೆ ಜಿತೇಂದ್ರ ಮತ್ತು ರಂಜೀತಾ ಇಬ್ಬರೂ ಕೋಣೆಯಿಂದ ಎಷ್ಟೇ ಹೊತ್ತಾದರೂ ಕೋಣೆಯಿಂದ ಹೊರಗೆ ಬರಲಿಲ್ಲ. ಹೀಗಾಗಿ ಕಲುರಾಮ್ ಅವರು ತಮ್ಮ ಕೆಲಸಕ್ಕೆ ತೆರಳಿದ್ದಾರೆ. ಆದರೆ ಅವರ ಮಗ ದಂಪತಿ ಕೋಣೆಯಿಂದ ಹೊರಬರುವುದನ್ನು ಕಾಯುತ್ತಿದ್ದರು. ಬಳಿಕ ಕೋಣೆಯಿಂದ ಯಾವುದೇ ಶಬ್ದ ಬಾರದೆ ಇದ್ದಾಗ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಗಿಲು ಒಡೆದು ನೋಡಿದಾಗ ಕೊಠಡಿಯೊಳಗೆ ಪತಿ-ಪತ್ನಿಯ ಶವ ಪತ್ತೆಯಾಗಿದೆ. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಮಂಗಳವಾರದ ವೇಳೆಗೆ ಸಾವಿನ ಕಾರಣ ತಿಳಿಯಬಹುದು ಎನ್ನಲಾಗುತ್ತಿದೆ.

 

Gayathri SG

Recent Posts

ನಾಳೆ ದಾವಣಗೆರೆಗೆ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭೇಟಿ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ನಾಳೆ ಮೇ ಮೂರರಂದು ದಾವಣಗೆರೆಗೆ ಆಗಮಿಸುತ್ತಿದ್ದಾರೆ.

3 hours ago

ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ತಳ್ಳುವ ಹುನ್ನಾರ ನಡೆಸುತ್ತಿದೆ: ಸುನಿಲ್ ಕುಮಾರ್ ಬಜಾಲ್

ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅಂದಿನ ಕಾರ್ಮಿಕ ವರ್ಗ ಇಂದು ಮತ್ತೆ ದೇಶವನ್ನು ಉಳಿಸಲು ಸನ್ನದ್ದವಾಗಬೇಕು.ಕಳೆದ 10…

4 hours ago

ಮಲೆಮಹದೇಶ್ವರನ ಹುಂಡಿಯಲ್ಲಿ 3.05 ಕೋಟಿ ಕಾಣಿಕೆ ಸಂಗ್ರಹ

ಪವಾಡ ಪುರುಷ ಮಲೆ ಮಹದೇಶ್ವರ ಕೋಟಿ ಒಡೆಯನಾಗಿ ಮುಂದುವರೆಯುತ್ತಿದ್ದು, ಇದೀಗ 34 ದಿನಗಳ ಅಂತರದಲ್ಲಿ ಮೂರು ಕೋಟಿ ನಾಲ್ಕು ಲಕ್ಷದ…

4 hours ago

ಪ್ರಜ್ವಲ್ ವಿದೇಶಕ್ಕೆ ಹೋಗಲು ಕ್ಲಿಯರೆನ್ಸ್ ಕೊಟ್ಟವರು ಯಾರು: ಸಲೀಂ ಅಹ್ಮದ್

ಅಶ್ಲೀಲ ವೀಡಿಯೋ ಪ್ರಕರಣ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿದ್ದು, ಅವರಿಗೆ ಕ್ಲಿಯರೆನ್ಸ್ ಕೊಟ್ಟವರು ಯಾರು ಎಂಬುದರ…

5 hours ago

ಸಿಎನ್ ಜಿ ಇಂಧನ ನಿರಂತರ ಪೂರೈಕೆಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಯಶ್ ಪಾಲ್ ಸುವರ್ಣ ಮನವಿ

ಉಡುಪಿ ಜಿಲ್ಲೆಯಾದ್ಯಂತ ಸಿ ಎನ್ ಜಿ ಬಂಕ್ ಗಳಲ್ಲಿ ಇಂಧನ ಕೊರತೆಯಿಂದ ರಿಕ್ಷಾ ಚಾಲಕರು ಗಂಟೆಗಟ್ಟಲೆ ಇಂಧನಕ್ಕಾಗಿ ಕಾಯುವ ಸನ್ನಿವೇಶ…

6 hours ago

ಲಕ್ಷ್ಮೀ ಹೆಬ್ಬಾಳಕರ್ ಮನೆಗೆ ಬಂದು ಕೃತಜ್ಞತೆ ಸಲ್ಲಿಸಿದ ನೇಹಾ ಹಿರೇಮಠ ತಂದೆ-ತಾಯಿ

ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ…

6 hours ago