ಇಂದೋರ್,ಅ.26 : ಮಧ್ಯಪ್ರದೇಶದ ಇಂದೋರ್ನಲ್ಲಿ ಆರು ಮಂದಿಗೆ ಹೊಸ ಮಾದರಿಯ ಎವೈ4 ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ದೆಹಲಿಯಲ್ಲಿರುವ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರ (ಎನ್ಸಿಡಿಸಿ) ನೀಡಿರುವ ವರದಿಯಲ್ಲಿ ಈ ಅಂಶ ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆ ಆರು ಮಂದಿಯ ಗಂಟಲು ದ್ರವವನ್ನು ಜಿನೋಮ್ ಪರೀಕ್ಷೆಗೆ ರವಾನಿಸಲಾಗಿತ್ತು. ಆರು ಮಂದಿಗೆ ಎವೈ4 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮುಖ್ಯ ಆರೋಗ್ಯಾಧಿಕಾರಿ ಬಿ.ಎಸ್.ಸೈತ್ಯಾ ಸ್ಪಷ್ಟಪಡಿಸಿದ್ದಾರೆ.
ಎವೈ4 ಸೋಂಕು ಕಾಣಿಸಿಕೊಂಡಿದ್ದ ಆರು ಮಂದಿಗೂ ಲಸಿಕೆ ಹಾಕಿದ ನಂತರ ಅವರು ಗುಣಮುಖರಾಗಿದ್ದಾರೆ. ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 50 ಮಂದಿಗೆ ಸೋಂಕು ಹರಡಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಕೊರೊನಾ ವೇರಿಯಂಟ್ನಲ್ಲಿ ಹೊಸ ಮಾದರಿಯ ಎವೈ 4 ಸೋಂಕಿನ ಗಂಭೀರತೆ ಬಗ್ಗೆ ಇನ್ನು ಅಧ್ಯಯನ ನಡೆಸಿಲ್ಲ ಎಂದು ಮಹಾತ್ಮ ಗಾಂಧಿ ಸ್ಮಾರಕ ಆಸ್ಪತ್ರೆಯ ಮುಖ್ಯಸ್ಥೆ ಡಾ.ಅನಿತಾ ಮುಥಾ ಹೇಳಿದ್ದಾರೆ.